This is the title of the web page
This is the title of the web page
National NewsVideo News

ಕೋಳಿ ಖಾಸಗಿ ಭಾಗಕ್ಕೆ ಪಟಾಕಿ ಇಟ್ಟು ಸಿಡಿಸಿ ಕ್ರೂರತನ ಮೆರೆದ ಯುವಕರು..!


K2kannadanews.in

ವೈರಲ್ ನ್ಯೂಸ್: ಅಸಹಾಯಕ ಕೊಳಿಯೊಂದನ್ನು(Hen) ಹಿಡಿದು ಅದರ ಖಾಸಗಿ ಭಾಗಕ್ಕೆ(Private part) ನಾಲ್ಕು ಯುವಕರು ಪಟಾಕಿ(Firecracker) ಇಟ್ಟು ಸಿಡಿಸಿದ್ದು ಕೊಂದ ಕ್ರೂರತನ ಮೆರೆದ ಘಟನೆಯೊಂದು ಅಸ್ಸಾಮ್‌ನ ನಗಾಂವ್ ಜಿಲ್ಲೆಯ (Nagaon district) ರಾಹಾ ಗಾಂವ್‌ನಲ್ಲಿ (Raha Gaon) ನಡೆದಿದೆ.

ಘಟನೆಯ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಬಹಳಷ್ಟು ಜನರು ಹುಡುಗರ ಕ್ರೂರತನವನ್ನು ಖಂಡಿಸಿದ್ದು, ಶಿಕ್ಷೆಗೆ ಆಗ್ರಹಿಸಿದ್ದಾರೆ. ಕೋಳಿಯ ಖಾಸಗಿ ಭಾಗದಲ್ಲಿ ನಾಲ್ವರು ಹುಡುಗರು ಪಟಾಕಿಯನ್ನು ಇಟ್ಟರೇ ಮತ್ತು ಇಬ್ಬರು ಪಟಾಕಿಗೆ ಬೆಂಕಿ ಹಚ್ಚುತ್ತಾರೆ. ಆಗ ಪಟಾಕಿ ಸ್ಫೋಟಗೊಂಡು ಕೋಳಿ ನರಳಿ ಸಾಯುವುದನ್ನು ವಿಡಿಯೋದಲ್ಲಿ ಕಾಣಬಹುದು.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಎನ್‌ಜಿಒ, ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ಗಮನಕ್ಕೆ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಡಳಿತ ಮತ್ತು ಪೊಲೀಸರನ್ನು ಪೋಸ್ಟ್‌ನಲ್ಲಿ ಟ್ಯಾಗ್ ಮಾಡಲಾಗಿದೆ.


[ays_poll id=3]