This is the title of the web page
This is the title of the web page
State News

ಇಡಪನೂರು ಠಾಣಾ ಪಿಎಸ್ಐ ಅವರಿಗೆ ಮಾಹಿತಿ ಆಯೋಗ ದಂಡ


ರಾಯಚೂರು : ಸಿರವಾರ ಪೊಲೀಸ್ ಠಾಣೆಯ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಆರ್‌ಟಿಐ ಮೂಲಕ ಹೇಳಲಾಗಿದ್ದ ಮಾಹಿತಿಯನ್ನು, ಠಾಣೆಯ ಪಿಎಸ್ಐ ಉದ್ದೇಶಪೂರ್ವಕವಾಗಿ ಉಲ್ಲಂಘನೆಯೆಂದು ಪರಿಗಣಿಸಿರುವ ಆಯೋಗವು ಮಾಹಿತಿ ಹಕ್ಕು ಅಧಿನಿಯಮ ಪ್ರಕಾರ ಪಿಎಸ್ಐ ಅವಿನಾಶ್ ಕಾಂಬಳೆ ಅವರಿಗೆ 25,000 ರೂ ದಂಡ ವಿಧಿಸಿದೆ.

ಹೌದು ಸಿರವಾರ ತಾಲೂಕಿನ ಜಾಲಪುರ ಕ್ಯಾಂಪ್ನ ನಿವಾಸಿ ಪವನ್ ಕುಮಾರ್ ಅವರು 01.06.2022 ರ ರಾತ್ರಿ 7.50 ರಿಂದ ರಾತ್ರಿ 11:50 ರವರೆಗಿನ ಸಿರವಾರ ಪೊಲೀಸ್ ಠಾಣೆಯ ಎಲ್ಲಾ ಸಿಸಿ ಟಿವಿ ದೃಶ್ಯಾವಳಿಗಳ ರೆಕಾರ್ಡಿಂಗ್‌ಗಳನ್ನು ಒದಗಿಸುವಂತೆ ವಿನಂತಿ. (ಒಟ್ಟು 4 ಗಂಟೆಗಳು) ಈ ನಿರ್ದಿಷ್ಟ ಮಾಹಿತಿಯನ್ನು ಆರ್‌ಟಿಐ ಕಾಯ್ದೆಯ ಪ್ರಕಾರ 48 ಗಂಟೆಗಳ ಒಳಗೆ ಅಗತ್ಯವಿರುವ ಡೇಟಾವನ್ನು ಒದಗಿಸಲು ವಿನಂತಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗವು ಮೇಲ್ಮನವಿದಾರರ ಮೌಖಿಕ ಮಾನವಿಯನ್ನು ಪರಿಗಣಿಸಿ, ಕೋರಿರುವ ಮಾಹಿತಿಗೆ ಸಂಬಂಧಿಸಿದಂತೆ ಖುದ್ದಾಗಿ ಮಾಹಿತಿ ನೀಡಲು ವಿಫಲವಾದ ಹಿನ್ನೆಲೆಯಲ್ಲಿ, ಕಲಂ 7(1)&7(2)ರ ಉದ್ದೇಶಪೂರ್ವಕವಾಗಿ ಉಲ್ಲಂಘನೆ ಆಗಿದೆ ಎಂದು ಪರಿಗಣಿಸಿದ ಆಯೋಗ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 20(1)ರನ್ವಯ ಪ್ರಸ್ತುತ ಇಡಪನೂರು ಪೊಲೀಸ್ ಠಾಣೆಯ ಪಿಎಸ್ಐ ಅವಿನಾಶ, ಕಾಂಬಳೆ, ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪೊಲೀಸ್ ಸಬ್ ಇನ್ಸಪೆಕ್ಟರ್, ಸಿರವಾರ ಪೊಲೀಸ್ ಸ್ಟೇಶನ್, ಸಿರವಾರ ತಾಲ್ಲೂಕು, ರಾಯಚೂರು ಜಿಲ್ಲೆ ರವರಿಗೆ ರೂ.25,000/-ಗಳ ದಂಡ ವಿಧಿಸಿ ಆದೇಶ ಹೊರಡಿಸಿದೆ.


[ays_poll id=3]