This is the title of the web page
This is the title of the web page
Crime NewsLocal NewsVideo News

ಕ್ಷುಲ್ಲಕ ಕಾರಣಕ್ಕೆ ಅಸ್ಕಿಹಾಳದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ..

Oplus_131072

K2kannadanews.in

Fight between 2 groups ರಾಯಚೂರು : ಸುಳ್ಳು ಕರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿ ಐವರು ಆಸ್ಪತ್ರೆಗೆ ದಾಖಲಾದ ಘಟನೆ ಅಸ್ಕಿಹಾಳದಲ್ಲಿ ನಡೆದಿದೆ.

ಹೌದು ರಾಯಚೂರು ನಗರದ ಹೊರಹೊಲೆಯಲ್ಲಿರುವ ಆಸ್ಕಿಹಾಳದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಕಳೆದ ಎರಡು ದಿನಗಳ ಹಿಂದೆ ವಾಹನ ಅಪಘಾತ ವಿಚಾರದಲ್ಲಿ ಪಂಚಾಯಿತಿ ನಡೆಸಿರುವ ವಿಚಾರಕ್ಕೆ ಈ ಒಂದು ಮಾರಮಾರಿಯಾಗಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ 5 ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ರಿಮ್ಸ್ ನ ರವಾನಿಸಲಾಗಿದೆ.

ರಂಗಪ್ಪ, ಅನಿಲ, ಪವನ, ತಿಮ್ಮ, ಲೋಹಿತ‌,ಚಂದ್ರು, ಮತ್ತು ರೇಷ್ಮ, ಮನೋಹರ, ನರಸಪ್ಪ ಮತ್ತು ಇತರರ ನಡುವೆ ಜಗಳವಾಗಿದ್ದು, ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.ಪಶ್ಚಿಮ ಠಾಣೆ ಪಿಎಸ್ ಐ ಶಾಂತಮೂರ್ತಿ ತನಿಖೆ ನಡೆಸಿದ್ದಾರೆ. ಆರೋಪಿತರೆಲ್ಲ ಕೈಯಲ್ಲಿ ಬೆತ್ತ, ರಾಡು, ಕಟ್ಟಿಗೆಗಳು ಹಿಡಿದಿದ್ದರೆಂದು ಫಿರ್ಯಾದಿದಾರರು ದೂರು ಕೊಟ್ಟಿದ್ದಾರೆ.


[ays_poll id=3]