
ಸಿರವಾರ : ರೈತರ ವಿವಿಧ ಬೆಳೆಗಳು ಒಣಗುತ್ತಿದ್ದು, ವಿತರಣಾ ಕಾಲುವೆಗಳಿಗೆ ನೀರು ಹರಿಸಲು ಒತ್ತಾಯಿಸಿ ಪಟ್ಟಣದ ಮಾನ್ವಿ ಕ್ರಾಸ್ ಬಳಿ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಿದ ರೈತ ಸಮೂಹ ಸಮರ್ಪಕವಾಗಿ ನೀರು ಹರಿಸಲು ಸೂಚಿಸುವಂತೆ ಒತ್ತಾಯಿಸಿದರು.
ತುಂಗಭದ್ರಾ ಎಡದಂಡೆ ನಾಲೆಯ ವಿತರಣಾ ಕಾಲುವೆಗಳಾದ 90,91,92, ಸೇರಿದಂತೆ ಕೆಳಭಾಗದ ಕಾಲುವೆ ವ್ಯಾಪ್ತಿಯ ಜಮೀನುಗಳಿಗೆ ಅಗತ್ಯವಾದ ನೀರು ಹರಿಸದೆ ಇರುವುದರಿಂದ ತಾಳ್ಮೆ ಕಳೆದುಕೊಂಡ ರೈತರು ಪ್ರತಿಭಟನೆ ಮಾಡಿದರು. ಸಂಬಂಧಿಸಿದ ಅಧಿಕಾರಿಗಳು ನಿಗಾ ವಹಿಸುವ ಮೂಲಕ ಅಗತ್ಯವಾದ ನೀರಿನ ಹರಿವನ್ನು ಹೆಚ್ಚಿಸಲು ಒತ್ತಾಯಿಸಲಾಯಿತು.
![]() |
![]() |
![]() |
![]() |
![]() |
[ays_poll id=3]