This is the title of the web page
This is the title of the web page
Crime NewsLocal News

ಖಾಸಗಿ ಬಸ್, ಇನ್ನೋವಾ ಕಾರ್ ನಡುವೆ ಮುಖಾಮುಖಿ ಡಿಕ್ಕಿ : ಇದೆ ಕಾರಣ..?


K2kannadanews.in

Accident News ರಾಯಚೂರು : ಖಾಸಗಿ ಬಸ್ (Privet bus) ಹಾಗೂ ಇನ್ನೋವಾ (Innova car) ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿ ಇಬ್ಬರು ಮೃತಪಟ್ಟ (2 died) ಘಟನೆ ಕಸಬೆ ಕ್ಯಾಂಪ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ರಾಯಚೂರು (Raichur) ತಾಲ್ಲೂಕಿನ ಕಸಬೆ ಕ್ಯಾಂಪ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ (State haiway) ಅಪಘಾತ ನಡೆದಿದ್ದು, ಸ್ಥಳದಲ್ಲೇ (Spot) ಅತ್ತೆ ಸೊಸೆ ಮೃತಪಟ್ಟು, ಐದು ಜನರಿಗೆ ಗಾಯಗಳಾಗಿವೆ. ಇನ್ನೋವಾ ಕಾರ್ ನಲ್ಲಿದ್ದ ಮಾರಿಯಾ ಗೀತಾ(Geetha 38) ಹಾಗೂ ಅಮಲ್ ಪಾಲ್ ಮೇರಿ(Amal 64) ಮೃತಪಟ್ಟ ದುರ್ದೈವಿಗಳು. ಕಾರ್ ನಲ್ಲಿ ಒಟ್ಟು ಏಳು ಜನ (7 member) ಪ್ರಯಾಣಿಸುತ್ತಿದ್ದರು.

ಇನ್ನೂ ಹೈದ್ರಾಬಾದ್ Hyderabad) ನಿಂದ ಸಿಂಧನೂರು(Sindhanur) ಮಾರ್ಗವಾಗಿ ಹೊರಟಿದ್ದ ಖಾಸಗಿ ಬಸ್ ಮತ್ತು ಗದಗ (gadag) ನಿಂದ ರಾಯಚೂರು (Raichur) ಮಾರ್ಗವಾಗಿ ಬರುತ್ತಿದ್ದ ಇನ್ನೋವಾ ಕಾರ್ ನಡುವೆ ಅಪಘಾತ ಸಂಭವಿಸಿದೆ. ಇನ್ನೊಂದು ವಾಹನ ಸೈಡ್ (Over take) ಹೊಡೆಯಲು ಹೋದ ಸಂದರ್ಭದಲ್ಲಿ ಅಪಘಾತವಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನೋವಾ ಕಾರ್ ನಲ್ಲಿ ಮೃತಪಟ್ಟ ಇಬ್ಬರ ಶವಗಳನ್ನು ರಿಮ್ಸ್ (RIMS) ಶವಗಾರಕ್ಕೆ ಕಳುಹಿಸಲಾಗಿದ್ದು, ಗಾಯಾಳುಗಳನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ (hospital) ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ರಾಯಚೂರು ಗ್ರಾಮೀಣ ಠಾಣೆಯಲ್ಲಿ (Raichur) ಪ್ರಕರಣ ದಾಖಲಾಗಿದೆ.


[ays_poll id=3]