This is the title of the web page
This is the title of the web page
Sports NewsVideo News

IPL ಒಂದೇ ಪಂದ್ಯದಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದಾನೆ ಈ ಬ್ಯಾಟ್ಸ್ ಮನ್..?


K2kannadanews.in

IPL 2014 : ಐಪಿಎಲ್‌ನಲ್ಲಿ ಇದುವರೆಗೆ ಯಾವುದೇ ಬ್ಯಾಟ್ಸ್‌ಮನ್ (Batsman) ಪಂದ್ಯವೊಂದರಲ್ಲಿ (Match) ಎರಡು ಬಾರಿ 0 ರನ್ ಗಳಿಸಿದ ಸಂದರ್ಭವೊಂದು ಕೂಡ ಎದುರಾಗಿದೆ ಎಂದರೆ ನೀವು ಆಶ್ಚರ್ಯ ಪಡುವಿರಿ. T20 ಪಂದ್ಯದಲ್ಲಿ ಓರ್ವ ಬ್ಯಾಟ್ಸ್‌ಮನ್ ಎರಡು ಬಾರಿ 0 ರನ್ ಗೆ ಔಟ್ ಆಗುವುದು ಹೇಗೆ ಎಂದು ಅನೇಕ ಕ್ರಿಕೆಟ್ ಅಭಿಮಾನಿಗಳು (Cricket fans) ಆಶ್ಚರ್ಯಪಡುತ್ತಾರೆ. ನಿಮಗೂ ಆ ಪ್ರಶ್ನೆ ಹುಟ್ಟುತ್ತೆ..

ಹೌದು ಅಂದಿನ ಪಂದ್ಯದ ನಿರ್ಧಾರ ಸೂಪರ್ ಓವರ್ (Super over) ಮೂಲಕ ನಡೆಸಲಾಗಿತ್ತು. ತಂಡದ ನಿಯಮಿತ ಇನ್ನಿಂಗ್ಸ್‌ನಲ್ಲಿ (Innings), ಕಿಂಗ್ಸ್ XI ಪಂಜಾಬ್‌ನ ನಿಕೋಲಸ್ ಪೂರನ್ (Nikolas poran) ಅವರು ಖಾತೆಯನ್ನು ತೆರೆಯದೆಯೇ ಔಟಾಗಿದ್ದರು. ನಂತರ, ಸೂಪರ್ ಓವರ್‌ನಲ್ಲೂ ಬ್ಯಾಟ್ ಗೆ ಇಳಿದ ನಿಕೋಲಸ್ ಮತ್ತೆ ಶೂನ್ಯ ರನ್ ಗಳಿಸಿ ಔಟಾಗಿದ್ದರು. (duck out in ipl history)

ಐಪಿಎಲ್ 2020 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Dhelli capital’s) ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ (ಹೊಸ ಹೆಸರು ಪಂಜಾಬ್ ಕಿಂಗ್ಸ್) ನಡುವಿನ ಪಂದ್ಯದ ಸಂದರ್ಭದಲ್ಲಿ ಈ ಅವಕಾಶ ಎದುರಾಗಿದೆ. ಈ ಐಪಿಎಲ್ ಟೂರ್ನಿ ಯುಎಇಯಲ್ಲಿ (UAE) ನಡೆದಿತ್ತು. ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ (Overs) 8 ವಿಕೆಟ್ ಕಳೆದುಕೊಂಡು 157 ರನ್ (runs) ಗಳಿಸಿತ್ತು. ಪಂಜಾಬ್ ತಂಡ ಕೂಡ 20 ಓವರ್‌ಗಳಲ್ಲಿ 157 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂದ್ಯ ಟೈ (Tai) ಆಗಿದ್ದ ಕಾರಣ, ಸೋಲು-ಗೆಲುವನ್ನು ಸೂಪರ್ ಓವರ್ ಮೂಲಕ ನಿರ್ಧರಿಸಲಾಯಿತು. ನಿಕೋಲಸ್ ಪುರನ್ ಕೇವಲ ಮೂರು ಎಸೆತಗಳನ್ನು ಆಡಿ 0 ರನ್ ಗಳಿಸಿ ಔಟಾಗಿದ್ದರು, ನಂತರ ಸೂಪರ್ ಓವರ್ವನಲ್ಲಿ ಬ್ಯಾಟ್ ಗೆ ಇಳಿದ ನಿಕೋಲಸ್ ಮತ್ತೆ ಶೂನ್ಯ ರನ್ ಗಳಿಸಿ ಔಟಾಗಿದ್ದರು.


[ays_poll id=3]