This is the title of the web page
This is the title of the web page
State News

ಮೇಕೆ ಮರಿಗೆ ಹಾಲುಣಿಸುವ ಶ್ವಾನ : ಅಚ್ಚರಿಗೆ ಮಾರುಹೋದ ಜನ..!


K2kannadanews.in

dog baby goat : ಪ್ರತಿನಿತ್ಯ ನಮ್ಮ ಸುತ್ತಮುತ್ತ ಒಂದಲ್ಲ ಒಂದು ಅಪರೂಪದ (Rare) ಘಟನೆಗಳು ಜರುಗುತ್ತಿರುತ್ತವೆ. ಅಂತಹದ್ದೆ ಒಂದು ಘಟನೆ, ನಾಯಿಯೊಂದು (Dog) ಮೇಕೆ ಮರಿಗೆ (Baby goat) ಹಾಲುಣಿಸುವ ದೃಷ್ಯ ಜನರಿಗೆ ಅಚ್ಚರಿ ತಂದಿದೆ. ಈ ಅಪರೂಪರದ ಮಾತೃತ್ವಕ್ಕೆ ಜನರು (Dog Love) ಮಾರುಹೋಗಿದ್ದಾರೆ.

ಆ ತಾಯಿ ಶ್ವಾನವು 15ದಿನಗಳ ಹಿಂದಷ್ಟೇ (15 days back) ಮೂರು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ದುರಾದೃಷ್ಟವಶಾತ್ unfortunately) ಅದರಲ್ಲಿ ಒಂದು ನಾಯಿ ಮರಿ ಅಸುನೀಗಿತ್ತು. ಉಳಿದೆರಡು ನಾಯಿಮರಿಗಳು ತಾಯಿಯಿಂದ ಬೇರ್ಪಟಿತ್ತು. ಕರುಳಿನ ಬಳ್ಳಿಗಳನ್ನು ಕಳೆದುಕೊಂಡ ದುಃಖದಲ್ಲಿ ತಾಯಿ ಶ್ವಾನವಿತ್ತು. ಇದರ ನೋವು ಅರಿತೋ ಏನೋ ವಾರದ ಹಿಂದಷ್ಟೇ ಜನಿಸಿದ ಮೇಕೆ ಮರಿಯೊಂದು ಶ್ವಾನದದೊಂದಿಗೆ ಆತ್ಮೀಯತೆಯನ್ನು ಬೆಳೆಸಿಕೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ತನ್ನ ಕಂಡು ಓಡೋಡಿ ಬರುವ ಮೇಕೆ ಮರಿಗೆ ಶ್ವಾನವು ಹಾಲುಣಿಸುತ್ತಿದೆ. ಈ ಅಪರೂಪರದ ಮಾತೃತ್ವಕ್ಕೆ ಜನರು (Dog Love) ಮಾರುಹೋಗಿದ್ದಾರೆ.

ದೊಡ್ಡಬಳ್ಳಾಪುರದ‌ (Doddaballapura) ರಘುನಾಥಪುರದಲ್ಲಿ ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಗ್ರಾಮದ ಕೃಷ್ಣಪ್ರಸಾದ್ (krisnaprsad) ಎಂಬುವವರ‌ ಮನೆಯ ಶ್ವಾನವು ಮೇಕೆ ಮರಿಗೆ ಹಾಲುಣಿಸುತ್ತಿದೆ. ಮೇಕೆ ಮರಿಯು ಜನ್ಮ ನೀಡಿದ ತಾಯಿಗಿಂತ ನಾಯಿ ಜತೆಗೆ ಹೆಚ್ಚು ಒಡನಾಟವನ್ನು ಹೊಂದಿದೆ. ಶ್ವಾನದ ಮೊಲೆಹಾಲು ಕುಡಿಯುವ ಮೇಕೆ ಮರಿಯನ್ನು ನೋಡುವುದೇ ಜನರಿಗೆ ಆಶ್ಚರ್ಯದ ಸಂಗತಿಯಾಗಿದೆ. ಕಳೆದ ಒಂದು ವಾರದಿಂದ ಮೇಕೆಮರಿ ಮತ್ತು ಶ್ವಾನದ ವಾತ್ಸಲ್ಯವು ಮುಂದುವರಿದಿದೆ.


[ays_poll id=3]