This is the title of the web page
This is the title of the web page
Crime NewsState News

ಸಾಲಮಾಡಿ ಬೆಳೆದ ತೊಗರಿ ಮಳೆಯಿಲ್ಲದೆ ನಾಶ : ರೈತ ಆತ್ಮಹತ್ಯೆ


K2kannadanews.in

ಮಸ್ಕಿ(Maski) : ಸಾಲಸೋಲ ಮಾಡಿ ಬಿತ್ರನೆ ಮಾಡಿದ್ದ ತೊಗರಿ ಬೆಳೆ ಮಳೆಯಿಲ್ಲದೆ ನಾಶಗೊಂಡ ಹಿನ್ನೆಲೆ ತನ್ನ ಹೊಲದಲ್ಲೇ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾರಲದಿನ್ನಿ ತಾಂಡಾದಲ್ಲಿ ನಡೆದಿದೆ.

ಹೌದು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮಾರಲದಿನ್ನಿ(Maraladinni) ತಾಂಡಾದಲ್ಲಿ ಬುಧುವಾರ ರಾತ್ರಿ ಘಟನೆ ನಡೆದಿದೆ. ಚೆಂದಪ್ಪ(chandappa 60) ಆತ್ಮಹತ್ಯೆ(suicide) ಮಾಡಿಕೊಂಡ ರೈತ ಎಂದು ಗುರುತಿಸಲಾಗಿದೆ. 3 ಎಕರೆ ಭೂಮಿ ಹೊಂದಿದ್ದ ರೈತ ಚಂದಪ್ಪ ಮಸ್ಕಿ ಎಸ್ ಬಿ ಐ(SBI) ಬ್ಯಾಂಕಿನಲ್ಲಿ 2.40 ಲಕ್ಷ ಹಾಗೂ 4ಲಕ್ಷ ಕೈ ಸಾಲ(lone) ಪಡೆದುಕೊಂಡು ಕೃಷಿ ಚಟುವಟಿಕೆ ನಡೆಸಿದ್ದ.

ಮಳೆ(Rain) ನಿರೀಕ್ಷೆಯಲ್ಲಿದ್ದ ರೈತ ಚಂದಪ್ಪ ಸಾಲ ಮಾಡಿ ತನ್ನ ಮೂರು ಎಕರೆ ಜಮೀನಿನಲ್ಲಿ ತೊಗರಿ ಬೆಳೆ(Sorghum crop) ಬಿತ್ತನೆ ಮಾಡಿದ್ದರು. ಆದರೆ ಮಳೆ ಬಾರದ ಹಿನ್ನೆಲೆ ಉಂಟಾದ ಬರಕ್ಕೆ ತೊಗರಿ ಬೆಳೆ ಒಣಗಿ(lose) ಹೋಗಿವೆ. ಇದರಿಂದ ಮನನೊಂದು(One mind) ತನ್ನ ಜಮೀನಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಮಸ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.


[ays_poll id=3]