
ಸಿಂಧನೂರು : ಕಾಮಾಲೆ ಇರೋವ್ರಿಗೆ ಕಾಣೋದೆಲ್ಲಾ ಹಳದಿ ಅನ್ನೋ ರೀತಿ ಆಗಿದೆ ಅಂತ ಸಿ ಟಿ ರವಿ ವಿರುದ್ಧ ವೈದ್ಯಕೀಯ ಹಾಗೂ ರಾಯಚೂರು ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ವ್ಯಂಗ್ಯ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆದಿದೆ. ಹಿಂದಿನ ಬಿಜೆಪಿ ಸರ್ಕಾರದ 40% ಗೆ ಬೇಸತ್ತು, ಪಾರದರ್ಶಕ ಆಡಳಿತಕ್ಕಾಗಿ ಕಾಂಗ್ರೆಸ್ಗೆ ಜನ ಆಶೀರ್ವದಿಸಿದ್ದಾರೆ. ಯಾವುದೇ ಕಾರಣಕ್ಕೂ ನಾವು ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುವುದಿಲ್ಲ. ಪಾರದರ್ಶಕ ಆಡಳಿತ ನೀಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಟಿ ರವಿ ಕಮಿಷನ್ ದಂಧೆ ಆರೋಪ ವಿಚಾರಕ್ಕೆ ಪ್ರತಿಕ್ರಿಸಿದ ಸಚಿವರು, ಪಾಪ ಅವ್ರ ಸಂಘ ದೋಷ ಅದು, ಹಿಂದೆ ಎಂಎಲ್‌ಎ ಇದ್ರಲ್ಲ ಅವರು, ಬಿಜೆಪಿ ಎಂಎಲ್ ಎ ಸಂಘ ದೋಷ ಅದು. 40% ಲಂಚ ತೆಗೆದುಕೊಂಡು ಅವರಿಗೆ ಹೀಗಾಗಿದೆ. ಕಾಮಾಲೆ ಇರೋವ್ರಿಗೆ ಕಾಣೋದೆಲ್ಲಾ ಹಳದಿ ಅನ್ನೋ ರೀತಿ ಆಗಿದೆ ಅಂತ ವ್ಯಂಗ್ಯ ಮಾಡಿದರು.
![]() |
![]() |
![]() |
![]() |
![]() |
[ays_poll id=3]