This is the title of the web page
This is the title of the web page
Politics NewsState News

ನಿಗಮ ಮಂಡಳಿ ಸ್ಥಾನ : ರಾಯಚೂರು ಕಾರ್ಯಕರ್ತರಿಗೆ ಇಲ್ಲ..?


K2kannadanews.in

Corporation board seat : ಈಗಾಗಲೇ 34 ಶಾಸಕರಿಗೆ ನಿಗಮ ಮಂಡಳಿ ಸ್ಥಾನವನ್ನ ನೀಡಿರುವ ಕಾಂಗ್ರೆಸ್‌ ಪಕ್ಷ ಸಂಘಟನೆಗಾಗಿ ಕಾರ್ಯಕರ್ತರು, ನಾಯಕರಿಗೆ ಆದ್ಯತೆ ಕೊಡಲು ಮುಂದಾಗಿದೆ. ಈ ಒಂದು ಲಿಸ್ಟ್ ನಲ್ಲಿ ರಾಯಚೂರಿನ ಯಾವುವೊಬ್ಬ ಕಾಂಗ್ರೆಸ್ ಕಾರ್ಯಕರ್ತರಿಗೆ ಅಧ್ಯಕ್ಷ ಸ್ಥಾನ ಒಲೆದಿಲ್ಲ ಎನ್ನಲಾಗಿದೆ.

ಕಾಂಗ್ರೆಸ್‌ ಹೈಕಮಾಂಡ್‌ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಟಾರ್ಗೆಟ್‌ ನೀಡಿದ್ದು, ಶಾಸಕರನ್ನ ಹಾಗೂ ಕಾರ್ಯಕರ್ತರ ಅಸಮಾಧಾನವನ್ನ ಶಮನಗೊಳಿಸಲು ನಿಗಮ ಮಂಡಳಿ ಭಾಗ್ಯ ನೀಡಲು ಮುಂದಾಗಿದೆ. 34 ಶಾಸಕರಿಗೆ ಮೊದಲ ಪಟ್ಟಿಯಲ್ಲಿ ನಿಗಮ ಮಂಡಳಿ ಭಾಗ್ಯವನ್ನ ನೀಡಿರುವ ಕಾಂಗ್ರೆಸ್‌, ಎರಡನೇ ಪಟ್ಟಿಯಲ್ಲಿ 34 ಜನ ಕಾರ್ಯಕರ್ತರಿಗೆ ಅವಕಾಶವನ್ನ ಕಲ್ಪಸಿಕೊಡುವ ನಿಟ್ಟಿನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಸಭೆ ನಡೆಸಿದ್ದು, ಯಾರಿಗೆ ಮಣೆಯಾಕಬೇಕು ಎಂಬ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಅಲ್ಲದೆ ರಾಜ್ಯಾದ್ಯಂತ ಆಯಾ ಶಾಸಕರುಗಳ ಹಿಂಬಾಲಕರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದ. ಇತ್ತ ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ ಗೆದ್ದ ಮೂರು ಶಾಸಕರಿಗೂ ಕೂಡ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇನ್ನು ಈ ಒಂದು ಜಿಲ್ಲೆಗೆ ಅಧ್ಯಕ್ಷ ಸ್ಥಾನ ಸಿಗುವುದು ಕಷ್ಟ ಸಾಧ್ಯವಾದರೂ ಕೂಡ ಬೇಡಿಕೆ ಇಟ್ಟಿದ್ದರು. ಆದ್ರೆ ಯಾವುದೇ ಕಾರ್ಯಕರ್ತರಿಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಒಲೆದಿಲ್ಲ ಎನ್ನಲಾಗುತ್ತಿದೆ.


[ays_poll id=3]