This is the title of the web page
This is the title of the web page
Politics News

ನೀತಿ ಸಂಹಿತೆ ಉಲ್ಲಂಘನೆ ಅಪ್ಲಿಕೇಶನ್ ಮೂಲಕ ದೂರು ಸಲ್ಲಿಸಬಹುದು


K2 ಎಲೆಕ್ಷನ್ ನ್ಯೂಸ್ : 2023 ವಿಧಾನಸಭೆ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದೆ. ಇದರೊಂದಿಗೆ ಅಕ್ರಮ ತಡೆಯುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನೀತಿ ಸಂಹಿತೆ ಉಲ್ಲಂಘನೆ ಕಣ್ಣೆದುರಲ್ಲಿ ಆಗುತ್ತಿದ್ದರೆ ಮತದಾರರು ದೂರು ಸಲ್ಲಿಸಲು ಆಯೋಗದ ವತಿಯಿಂದ ಎರಡು ವಿಶೇಷ ಅಪ್ಲಿಕೇಶನ್ ಪರಿಚಯಿಸಲಾಗಿದೆ.

ನಿಮ್ಮ ಅಭ್ಯರ್ಥಿ ಬಗ್ಗೆ ತಿಳಿಯಿರಿ – ಕೆವೈಸಿ ಹಾಗೂ ಸಿ – ವಿಜಿಲ್ ಅಪ್ಲಿಕೇಶನ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆವೈಸಿ ಆಪ್ ಮೂಲಕ ಅಭ್ಯರ್ಥಿಗಳ ವಿವರಗಳನ್ನು ಸಾರ್ವಜನಿಕರು ಪಡೆಯಬಹುದು. ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿತ ದೂರುಗಳು ಕಂಡು ಬಂದಲ್ಲಿ ಸಿ -ವಿಜಿಲ್ ಆಪ್ ನಲ್ಲಿ ಮತದಾರರು ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ.

ಗೂಗಲ್ ಪ್ಲೇ ಮತ್ತು ಆಪಲ್ ಆಪ್ ಸ್ಟೋರ್ ನಲ್ಲಿ ಕೆವೈಸಿ ಆಪ್ ಲಭ್ಯವಿದೆ. ಈ ಅಪ್ಲಿಕೇಶನ್ ನಲ್ಲಿ ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯ ಮಾಹಿತಿ ಸಿಗಲಿದ್ದು, ಮತದಾರರು ಅಭ್ಯರ್ಥಿಗಳ ಹಿನ್ನೆಲೆ ತಿಳಿಯಲು ಸಹಾಯಕವಾಗಲಿದೆ. ಇದರೊಂದಿಗೆ ಸಾರ್ವಜನಿಕರು ಅಕ್ರಮಕ್ಕೆ ತಡೆ ಹಾಕಲು ಒಂದು ಬ್ರಹ್ಮಾಸ್ತ್ರ ನೀಡಿದಂತಾಗಿದೆ.


[ays_poll id=3]