This is the title of the web page
This is the title of the web page
State NewsVideo News

ಕಲ್ಲಿದ್ದಲು ಲೂಟಿ ಪ್ರಕರಣ : FIR ದಾಖಲು


K2kannadanews.in

ರಾಯಚೂರು : YTPT & RTPS ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಸ್ವಚ್ಛತೆ ಹೆಸರಲ್ಲಿ ಕಲ್ಲಿದ್ದಲು(Coal) ಲೂಟಿ ಪ್ರಕರಣಕ್ಕೆ ಸಂಬಂದಿಸಿದಂತೆ ಇಬ್ಬರ ವಿರುದ್ಧ ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ(FIR) ದಾಖಲಾಗದೆ.

ಹೌದು ರಾಯಚೂರು(Raichur) ತಾಲ್ಲೂಕಿನ ಯರಮರಸ್ ರೈಲ್ವೆ ನಿಲ್ದಾಣ(yaramars railway station) ವ್ಯಾಪ್ತಿಯಲ್ಲಿ ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಕಲ್ಲಿದ್ದಲು ಸಂಗ್ರಹಿಸಿದ ಸುದ್ದಿ ಬಿತ್ತರವಾಗುತ್ತಿದ್ದಂತೆ, ಇಲಾಖೆ ಮೂರು ಅಧಿಕಾರಿಗಳ ತಂಡ(officer’s team) ಕಳಿಸುವ ತನಿಖೆ ಮಾಡುವ ಮಾಲಕಬಮಾಹಿತಿ ಪಡೆದಿದೆ. ಇದೀಗ ಇದೇ ವಿಚಾರಕ್ಕೆ ಸಂಬಂದಿಸಿದಂತೆ, YTPS ಎಕ್ಸಿಕ್ಯೂಟಿವ್ ಡೈರೆಕ್ಟರ್(ED) ಮಹೇಂದ್ರ ಜಿ.ಸಿ ಅವರು ಗ್ರಾಮಾಂತರ ಠಾಣೆಯಲ್ಲಿ, ಇಬ್ಬರ ವಿರುದ್ಧ ಅಕ್ರಮ ಕಲ್ಲಿದ್ದಲು ದಾಸ್ತಾನು ಮಾಡಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ.

ಇನ್ನೂ ರೈಲ್ವೆ ನಿಲ್ದಾಣ ಹೊರವಲಯದಲ್ಲಿ 120 ಮೆಟ್ರಿಕ್ ಟನ್ ಕಚ್ಚಾ ಕಲ್ಲಿದ್ದಲು ಕಳ್ಳತನ ಮಾಡಿ, 5,00,000/- ರೂ. ಬೆಲೆಬಾಳುವ ಕಲಗಲಿದ್ದಲು ಅಕ್ರಮವಾಗಿ ಸಂಗ್ರಹ ಮಾಡಲಾಗಿದೆ ಎಂದು ದೂರು ಸಲ್ಲಿಸಿದ್ದಾರೆ. ಕರ್ನೂಲ್ ಶ್ರೀ ಗುರು ರಾಘವೇಂದ್ರ ಎಂಟರ್ ಪ್ರೈಸಸ್ ಗುತ್ತಿಗೆದಾರ ಎ1 ಆರೋಪಿ ಎಂದು ದೂರಿನಲ್ಲಿ ನಮೋದಿಸಲಾಗಿದೆ. ಯರಮರಸ್ ರೈಲ್ವು ನಿಲ್ದಾಣದ ಸ್ಟೇಷನ್ ಮಾಸ್ಟರ್ ಎ2 ಆರೋಪಿ ಎಂದು ದೂರಿನಲ್ಲಿ ದಾಖಲಿಸಿ, ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ದೂರು ದಾಖಲಿಸಿದ್ದಾರೆ.

 


[ays_poll id=3]