This is the title of the web page
This is the title of the web page
Crime NewsState News

ಧಗಧಗನೆ ಹೊತ್ತು ಉರಿದ ಸಿಮೆಂಟ್ ಲಾರಿ : ಚಾಲಕ ಜಸ್ಟ್ ಮಿಸ್..


K2kannadanews.in

lorry fire incident ರಾಯಚೂರು : ಬೈಪಾಸ್ ರಸ್ತೆಯಲ್ಲಿ ಸಿಮೆಂಟ್ ಹೊತ್ತು ಸಾಗುತ್ತಿದ್ದ ಲಾರಿಯೊಂದಕ್ಕೆ (lorry) ಶಾರ್ಟ್ ಸರ್ಕ್ಯೂಟ್ (Short circuit)ನಿಂದ ಬೆಂಕಿ ತಗುಲಿ ಲಕ್ಷಾಂತ ರೂಪಾಯಿ ಸಿಮೆಂಟ್ (Cement) ಮತ್ತು ಲಾರಿ ಬೆಂಕಿ ಕೆನ್ನಾಲಿಗೆಗೆ ಸುಟ್ಟು (burnt) ಕರಕಲಾದ ಘಟನೆ ನಗರ ಹೊರವಲಯದ ಬೈಪಾಸ್‌ (Bypass) ರಸ್ತೆಯಲ್ಲಿ ನಡೆದಿದೆ.

ಹೌದು ಲಾರಿಯು ಗೋವಾದಿಂದ (Goa to Kolkata) ಕಲ್ಕತ್ತಾ ಕಡೆ ತೆರಳುತ್ತಿದ್ದು, ಮಾರ್ಗ ಮದ್ಯ ರಾಯಚೂರು (Raichur) ಹೊರವಲಯದ ಬೈ ಪಾಸ್ ಬಳಿ ಘಟನೆ ನಡೆದಿದೆ. ಚಲಿಸುತ್ತಿದ್ದ (running) ವಾಹನದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಲಾರಿಗೆ ಬೆಂಕಿ ಹತ್ತಿ ಕೊಂಡ ಪರಿಣಾಮ ಲಾರಿ ಮತ್ತು ಲಾರಿಯಲ್ಲಿದ್ದ ಸಿಮೆಂಟ್‌ಗೆ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿದೆ.

ಲಾರಿಯು ತೆಲಂಗಾಣ (Telangana) ರಾಜ್ಯದ ನಲಗುಂಡ ಜಿಲ್ಲೆಯ ನ್ಯೂ ಧರ್ಮಾಪುರಂನ ಬಿ.ನಾಗಾರ್ಜುನ ಎಂಬುವರಿಗೆ ಸೇರಿದ್ದಾಗಿದೆ. ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


[ays_poll id=3]