This is the title of the web page
This is the title of the web page
Crime NewsState NewsVideo News

ಕಾರ್ ಟೈಯರ್ ಬ್ಲಾಸ್ಟ್ : ರಾಯಚೂರು ಮೂಲದ 3 ಜನ ಸಾವು..


K2kannadanews.in

Accident News : ಅಜ್ಜಿ ಶವ (Grand mother died body) ಕೊಂಡೊಯ್ಯುವಾಗ ಕಾರಿನ (car) ಟೈಯರ್ ಬ್ಲಾಸ್ಟ್ ಪಲ್ಟಿ, ರಾಯಚೂರು ಮೂಲದ 3 ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಚಿತ್ರದುರ್ಗ (chitradurga) ಜಿಲ್ಲೆಯ ಮೊಳಕಾಲ್ಮೂರು (Molakalmuru) ತಾಲ್ಲೂಕಿನ ರಾಂಪುರ ಬಳಿಯ ಗ್ರ್ಯಾಂಡ್ ಪೋರ್ಡ್ ಹೋಟೆಲ್ (Hotel) ಬಳಿ ಘಟನೆ ನಡೆದಿದೆ. ಬೆಂಗಳೂರಿನಿಂದ ಅಜ್ಜಿಯ ಶವ ಸಿರುಗುಪ್ಪಗೆ ಕೊಂಡೊಯ್ಯುತ್ತಿದ್ದರು. ಈ ವೇಳೆ ಕಾರಿನ ಟೈಯರ್ ಬ್ಲಾಸ್ಟ್ (Tire blast) ಆಗಿ ಕಾರು ಪಲ್ಟಿ ಹೊಡೆದಿದೆ. ಕಾರಿನಲ್ಲಿ ಚಾಲಕ ಸೇರಿ 6 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗುತ್ತಿದ್ದು, ಮೃತರು ರಾಯಚೂರು ಮತ್ತು ಸಿರಗುಪ್ಪ ಮೂಲದವರು ಎಂದು ಗುರುತಿಸಲಾಗಿದೆ.

ನಾಗಮ್ಮ(31), ತಾಯಮ್ಮ (56), ಧನರಾಜ್(39) ಹಾಗೂ ಚಾಲಕ ಶಿವು (26) ಗಂಭೀರ ಗಾಯಗೊಂಡಿದ್ದಾರೆ. ಸುರೇಶ್ (40), ಮಲ್ಲಿ (25), ಭೂಮಿಕ (9) ಮೃತ ದುರ್ದೈವಿಗಳು ಎನ್ನಲಾಗಿದೆ. ಘಟನೆಯಲ್ಲಿ 3 ಮಂದಿಗೆ ರಾಂಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ವನೀಡಲಾಗುತ್ತಿದೆ. ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬಂದು ಸಿಬ್ಬಂದಿಗಳು ಪರಿಶಿಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


[ays_poll id=3]