This is the title of the web page
This is the title of the web page
Crime NewsState News

ಲಕ್ಷಾಂತರ ಮೌಲ್ಯದ ಚಿನ್ನಾಭರಣ ಇಡಲು ಕಾರ್ ಸೇಫ್ ಅಲ್ಲ : ಯಾಕೆ ಗೊತ್ತಾ..?


K2 ಕ್ರೈಂ ನ್ಯೂಸ್ : ಕಾರಿನ ಗಾಜು ಹೊಡೆದು ಸೀಟಿನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಖದೀಮರು ಎಗರಿಸಿದ ಘಟನೆ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ನಡೆದಿದೆ.

ಕಲಬುರ್ಗಿ ನಗರದ ಜಿಡಿಎ ಲೇಔಟ್‍ನ ಗೋಕುಲನಗರದ ಶಿವುಕುಮಾರ ಹಿರೇಮಠ ಎಂಬುವವರ ಕಾರಿನ ಎಡಭಾಗದ ಹಿಂದಿನ ಬಾಗಿಲು ಗಾಜು ಒಡೆದು ಚಿನ್ನಾಭರಣ ದೋಚಿಕೊಂಡು ಹೋಗಲಾಗಿದೆ. ಕಾರಿನಲ್ಲಿದ್ದ 2 ಲಕ್ಷ ರೂ.ಮೌಲ್ಯದ 50 ಗ್ರಾಂ.ಬಂಗಾರ ಮಂಗಳಸೂತ್ರ, 2 ಲಕ್ಷ ರೂ.ಮೌಲ್ಯದ 50 ಗ್ರಾಂ.ಪ್ಲಾಟಿಗಳು, 40 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಸುತ್ತುಂಗುರ, 20 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಸುತ್ತುಂಗರವಿದ್ದ ಕಾಫಿ ಬಣ್ಣದ ಹ್ಯಾಂಡ್‍ಬ್ಯಾಗ್‍ನ್ನು ಕಾರಿನ ಹಿಂದಿನ ಶೀಟ್‍ನಲ್ಲಿಟ್ಟುಕೊಂಡು ಪತ್ನಿ ತೇಜಸ್ವಿನಿ ಅವರ ಜೊತೆಗೆ ನಗರದ ಮೋಹನ್ ಲಾಡ್ಜ್ ಎದರುಗಡೆಯ ಜಿ.ಕೆ.ಕಾಂಪ್ಲೆಕ್ಸ್‍ನಲ್ಲಿರುವ ಮಣಿಪುರಂ ಗೋಲ್ಡ್ ಲೋನ್ ಅಂಗಡಿಗೆ ಬಂದಿದ್ದಾರೆ.

ಜಿ.ಕೆ.ಕಾಂಪ್ಲೆಕ್ಸ್ ಪಕ್ಕದಲ್ಲಿ ಕಾರು ನಿಲ್ಲಿಸಿ ಕಾರಿನ ಹಿಂದಿನ ಸೀಟಿನಲ್ಲಿ ಇರಿಸಿದ್ದ ಚಿನ್ನಾಭರಣವಿದ್ದ ಬ್ಯಾಗನ್ನು ಅಲ್ಲಿಯೇ ಬಿಟ್ಟು ಉಪಹಾರ ಸೇವಿಸಲು ದಾವಣಗೆರೆ ಬೆಣ್ಣೆ ಹೋಟೆಲ್‍ಗೆ ಹೋಗಿದ್ದಾರೆ. ಉಪಹಾರ ಸೇವಿಸಿ ಮರಳಿ ಬರುವುದರೊಳಗೆ ಕಳ್ಳರು ಕಾರಿನ ಎಡಭಾಗದ ಹಿಂದಿನ ಬಾಗಿಲು ಗಾಜು ಒಡೆದು 4.60 ಲಕ್ಷ ರೂ.ಮೌಲ್ಯದ ಬಂಗಾರದ ಆಭರಣಗಳಿದ್ದ ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದ್ದು. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.


[ays_poll id=3]