This is the title of the web page
This is the title of the web page
State NewsVideo News

ದಲಿತರನ್ನು ಓಟ್ ಬ್ಯಾಂಕಿಗಾಗಿ ಬಳಸಿಕೊಂಡು ಉಂಡೇನಾಮ ಹಾಕುವ ಕಪಟನೀತಿ


K2kannadanews.in

Political News ರಾಯಚೂರು : ಸಿದ್ದರಾಮಯ್ಯ ನೇತೃತ್ವದ ಸರಕಾರದ(Siddaramayya government) ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿಯ (reservation) ಕುರಿತು ತರಾತುರಿಯಲ್ಲಿ ತೆಗೆದುಕೊಂಡಿರುವ ನಿರ್ಧಾರ, ದಲಿತರನ್ನು ಓಟ್ ಬ್ಯಾಂಕಿಗಾಗಿ (Dalits for Oat Bank) ಬಳಸಿಕೊಂಡು ಉಂಡೇನಾಮ ಹಾಕುವ ಕಾಂಗ್ರೇಸ್ಸಿನ (congress) ಕಪಟನೀತಿ ಮಾದಿಗ ಸಮಾಜಕ್ಕೆ ಮಾಡಿದ ಘನ ಘೋರ ಅಪರಾದ ಎಂದು ಜಿಲ್ಲಾ ಮಾದಿಗ ಸಮಾಜದ ಮುಖಂಡ ಎಂ ವಿರುಪಾಕ್ಷಿ ಅಸಮಧಾನ ವ್ಯಕ್ತಪಡಿಸಿದರು.

ಸರಕಾರ ನಿನ್ನೆ ಸಚಿವ ಸಂಪುಟದಲ್ಲಿ ಸದಾಶಿವ ಆಯೋಗ (Sadashiva Comitie) ಗರ್ಭದಲ್ಲಿ ಚರ್ಚೆ ಮಾಡದೆ. ವರದಿಯ ಆಳ ಮತ್ತು ಒಳ ಮಾಹಿತಿ ಚರ್ಚೆ ಮಾಡದೆ. ಉಷಾ ಬೆಹರಾ ವರದಿ (Usha behar Report) ಆಧಾರದ ಮೇಲೆ 341 ವಿಧಿಗೆ ತಿದ್ದುಪಡಿ ಮಾಡಿ ಅಯಾ ರಾಜ್ಯಗಳಿಗೆ ವರ್ಗಿಕರಣ ಮಾಡಬೆಕು ಅಂತ ವರದಿ ನೀಡಿದೆ ಎಂದು ಅಸಮಧಾನ ವ್ಯಕ್ತಪಡಿಸಿದ ಅವರು. ಕಾಂಗ್ರೆಸ್ ಸರಕಾರ ತಾನು ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ತಾನೇ ಹರಾಜು ಹಾಕಿಕೊಂಡು ಬೆತ್ತಲಾಗಿದೆ. ಅಪ್ರಸುತವಾಗಿರುವ 341ನೇ ವಿಧಿಯ ತಿದ್ದುಪಡಿಯ ಗುಮ್ಮವನ್ನು ತೋರಿಸಿ ಕಾಂಗ್ರೆಸ್ ಮಾದಿಗ ಸಮುದಾಯಕ್ಕೆ ಮೋಸ ಮಾಡಿದೆ. ಶೇ 15 ರ ಮೀಸಲಾತಿಯನ್ನು ವರ್ಗೀಕರಿಸಿದ್ದ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಬಗ್ಗೆ ಏನೂ ಮಾಡದ ಸಿದ್ದರಾಮಯ್ಯನವರ ಸರ್ಕಾರ ಈಗ ಕೈಚೆಲ್ಲಿಕೂತಿದೆ.

ತನ್ನ ಅಸಹಾಯಕತೆಯನ್ನು ಮುಚ್ಚಿಕೊಳ್ಳಲು ಮಾದಿಗ ದ್ರೋಹಿ ಕಾಂಗ್ರೆಸ್ ಈಗ 2008 ರ ಉಷಾ ಮೆಹ್ರಾ ವರದಿ ಹೇಳಿದಂತೆ ಸಂವಿಧಾನದ 341ವಿಧಿಗೆ ತಿದ್ದುಪಡಿ ತರಬೇಕು, ಅದಕ್ಕಾಗಿ ಕೇಂದ್ರ ಸರಕಾರಕ್ಕೆ ಶಿಫಾರಸು ಪತ್ರ ಬರೆಯುವುದಾಗಿ ಹೇಳುತ್ತಿದೆ. ಇದು ಕಪಟ ನಾಟಕವಲ್ಲದೇ ಬೇರೇನು ಅಲ್ಲ. ಇತ್ತೀಚಿಗೆ ರಾಜ್ಯದೆಲ್ಲೆಡೆ ಮಾದಿಗ ಮುನ್ನಡೆ ಸಮಾವೇಶಗಳ ಅಭೂತಪೂರ್ವ ಯಶಸ್ಸಿನಿಂದ ಕೆಂಗೆಟ್ಟಿರುವ ಕಾಂಗ್ರೆಸ್ಸು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶೋಷಿತ ಸಮಾಜಗಳನ್ನು ದಿಕ್ಕು ತಪ್ಪಿಸಲು ಇಂತಹ ನೀಚ ಕೃತ್ಯಕ್ಕೆ ಕೈಹಾಕಿದೆ. ಕಾಂಗ್ರೆಸ್ಸಿನ ಸಚಿವ ಸಂಪುಟದ ನಿರ್ಣಯವನ್ನು ಮಾದಿಗ ಸಮಾಜದ ನಾಯಕರುಗಳಾದ ನಾವು ಒಕ್ಕೊರಲಿನಿಂದ ಧಿಕ್ಕರಿಸುತ್ತೇವೆ ಮತ್ತು ಖಂಡಿಸುತ್ತೇವೆ.


[ays_poll id=3]