![]() |
![]() |
![]() |
![]() |
![]() |
K2 ಪೊಲಿಟಿಕಲ್ ನ್ಯೂಸ್ : ನೂತನ ಸರ್ಕಾರದ ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಶನಿವಾರ ನಿಗದಿಯಾಗಿದ್ದು ಸಚಿವ ಸ್ಥಾನ ಪಡೆದ ಶಾಸಕರ ಪಟ್ಟಿ ಬಹುತೇಕ ಅಂತಿಮವಾಗಿದ್ದು, ಶುಕ್ರವಾರ ರಾಜ ಭವನಕ್ಕೆ ರವಾನಿಯಾಗಿ ಶನಿವಾರ ಸಂಜೆ ಖಾತೆ ಹಂಚಿಕೆ ಮಾಡುವ ಸಾಧ್ಯತೆಗಳಿವೆ.
ಹೌದು ಪಕ್ಷದಲ್ಲಿನ ಮೂಲಗಳ ಪ್ರಕಾರ ಲಿಂಗಾಯಿತ, ಒಕ್ಕಲಿಗ ಸಮುದಾಯದ ಜತೆಗೆ ಹಿಂದುಳಿದ, ದಲಿತ ಸಮುದಾಯಕ್ಕೂ ಆದ್ಯತೆ ನೀಡಲಾಗಿದೆ. ಇನ್ನು ಶನಿವಾರ ಬೆಳಗ್ಗೆ11.30 ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ 20 ರಿಂದ 24 ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ವಿಧಾನಪರಿಷತ್‌ನಲ್ಲಿ ಸಭಾ ನಾಯಕರಾಗಲು ಒಬ್ಬರಿಗೆ ಸಚಿವ ಸ್ಥಾನ ನೀಡಲಾಗುತ್ತದೆ. ಪರಿಷತ್ ಪ್ರತಿನಿಧಿಯಾಗಿ ಹಿರಿಯ ಕಾಂಗ್ರೆಸ್ ನಾಯಕ, ರಾಯಚೂರು ಜಿಲ್ಲೆಯ ಎಸ್.ಎನ್.ಬೋಸರಾಜು ಅವರು ಸಂಪುಟ ಸೇರಲಿದ್ದಾರೆ. ಸಚಿವರಾಗಲು ಬಿ.ಕೆ.ಹರಿಪ್ರಸಾದ್, ಸಲೀಂ ಅಹಮದ್ ಕೂಡ ತೀವ್ರ ಲಾಬಿ ನಡೆಸಿದ್ದು ಇಬ್ಬರಿಗೂ ಅವಕಾಶ ಕಡಿಮೆ ಎಂದು ಹೇಳಲಾಗುತ್ತಿದೆ.
ಅಂತಿಮ ಪಟ್ಟಿಯಲ್ಲಿ ಯಾರ ಹೆಸರಿದೆ ?
ಕೆ.ವೆಂಕಟೇಶ( ಮೈಸೂರು), ಪುಟ್ಟರಂಗಶೆಟ್ಟಿ (ಚಾಮರಾಜನಗರ), ಕೆ.ಎನ್.ರಾಜಣ್ಣ( ತುಮಕೂರು), ಶಿವಾನಂದ ಪಾಟೀಲ( ವಿಜಯಪುರ), ಶರಣಬಸಪ್ಪ ದರ್ಶನಾಪುರ( ಯಾದಗಿರಿ), ಎಸ್.ಎನ್.ಬೋಸರಾಜು ( ರಾಯಚೂರು), ದಿನೇಶ್ ಗುಂಡೂರಾವ್ (ಬೆಂಗಳೂರು), ಎಸ್.ಎಸ್.ಮಲ್ಲಿಕಾರ್ಜುನ (ದಾವಣಗೆರೆ), ಎನ್.ಚಲುವರಾಯಸ್ವಾಮಿ( ಮಂಡ್ಯ)
ಬಿ.ಈಶ್ವರ ಖಂಡ್ರೆ( ಬೀದರ್), ಲಕ್ಷ್ಮಿ ಹೆಬ್ಬಾಳಕರ್ (ಬೆಳಗಾವಿ), ಬೈರತಿ ಸುರೇಶ್( ಬೆಂಗಳೂರು), ಮಧು ಬಂಗಾರಪ್ಪ(ಶಿವಮೊಗ್ಗ), ಕೆ.ಎಂ.ಶಿವಲಿಂಗೇಗೌಡ (ಹಾಸನ), ವಿನಯ ಕುಲಕರ್ಣಿ( ಧಾರವಾಡ), ಮಂಕಾಳ ವೈದ್ಯ( ಉತ್ತರ ಕನ್ನಡ), ಬಿ.ನಾಗೇಂದ್ರ( ಬಳ್ಳಾರಿ), ಟಿ.ಡಿ.ರಾಜೇಗೌಡ ( ಚಿಕ್ಕಮಗಳೂರು) ಶಿವರಾಜ ತಂಗಡಗಿ(ಕೊಪ್ಪಳ).
![]() |
![]() |
![]() |
![]() |
![]() |
[ays_poll id=3]