This is the title of the web page
This is the title of the web page
Crime NewsNational News

ಆಸ್ತಿಗಾಗಿ ಅಣ್ಣನ ಜೀವವನ್ನೆ ಕಸಿದ ಸಹೋದರ : ಎಂಥಾ ಹೀನ ಕೃತ್ಯ..?


K2 ಕ್ರೈಂ ನ್ಯೂಸ್ : ಜಮೀನು ವಿವಾದದ ಹಿನ್ನೆಲೆ  ಸ್ವಂತ ಸಹೋದರನ ಮೇಲೆಯೇ ಹಲವು ಬಾರಿ ಟ್ರ್ಯಾಕ್ಟರ್‌ ಹರಿಸಿದ ಬರ್ಬರವಾಗಿ ಕೊಂದ ಅಮಾನವೀಯ ಘಟನೆ ಭರತಪುರದಲ್ಲಿ ನಡೆದಿದೆ.

ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಕೃತ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಟ್ರ್ಯಾಕ್ಟರ್‌ಗೆ ಸಿಲುಕಿ ಮೃತಪಟ್ಟ ವ್ಯಕ್ತಿಯನ್ನು 30 ವರ್ಷದ ನಿರ್ಪತ್ ಗುರ್ಜರ್ ಎಂದು ಗುರುತಿಸಲಾಗಿದ್ದು, ಆತನ ಸಹೋದರ ದಾಮೋದರ್ ಗುರ್ಜಾರ್ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಎಂದು ಹೇಳಲಾಗಿದೆ.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಮೂರು ದಿನಗಳ ಹಿಂದೆಯೂ ಜಗಳವಾಗಿತ್ತು. ಸಹೋದರ ಟ್ರ್ಯಾಕ್ಟರ್ ಹರಿಸಿ ನಿರ್ಪತ್‌ನನ್ನು ಕೊಂದಿದ್ದಾನೆ. ಎಂದು ಭರತ್‌ಪುರದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಓಂಪ್ರಕಾಶ್ ಕಿಲಾನಿಯಾ ತಿಳಿಸಿದ್ದಾರೆ. ಇನ್ನು ಅಮಾನವೀಯ ಘಟನೆ ವಿರುದ್ಧ ನೆಟ್ಟಿಗರು ಸಾಕಷ್ಟು ಅಸಮಧಾನ ವ್ಯಕ್ತಪಡಿಸುತ್ತಿದ್ದು ಮಾನವೀಯ ಮೌಲ್ಯಗಳಿಗೆ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ.


[ays_poll id=3]