This is the title of the web page
This is the title of the web page
Politics News

ಬಿಜೆಪಿ ಸರ್ಕಾರದಲ್ಲಿ ಲಂಚ-ಮಂಚದ್ದೇ ಸದ್ದು: ಕಾಂಗ್ರೆಸ್


K2 ಪೊಲಿಟಿಕಲ್ ನ್ಯೂಸ್ : ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಟ್ವಿಟರ್ ನಲ್ಲಿ ವಾರ್ ನಡೆಸಿವೆ. ಸ್ಯಾಂಟ್ರೋ ರವಿ ವಿರುದ್ಧ ಮಹಿಳೆಯೊಬ್ಬರು ಮಾತನಾಡಿರುವ ವಿಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್. ಬಿಜೆಪಿ ಸರ್ಕಾರದ ವಿರುದ್ಧ ಆರೋಪಗಳ ಸರಿ ಮಳೆ ಸುರಿಸಿದೆ.

ಹೌದು ಬಿಜೆಪಿ ಸರ್ಕಾರದಲ್ಲಿ ಇರುವುದು ಲಂಚದ ಸದ್ದು ಹಾಗೂ ಮಂಚದ ಸದ್ದು ಎರಡೇ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಸ್ಯಾಂಟ್ರೋ ರವಿ ವಿರುದ್ಧ ಮಹಿಳೆಯೊಬ್ಬರು ಮಾತನಾಡಿರುವ ವಿಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಇದು ಲಂಚ-ಮಂಚದ ಸರ್ಕಾರ ಎನ್ನುವುದು ಪ್ರತಿದಿನವೂ ಸಾಬೀತಾಗುತ್ತಿದೆ. ಈಚೆಗೆ ಬೆಳಕಿಗೆ ಬಂದಷ್ಟೇ ವೇಗವಾಗಿ ಮುಚ್ಚಿಹಾಕಿದ್ದ ಸಿಎಂ ಕಾರ್ಯದರ್ಶಿಯ ಹನಿಟ್ರ್ಯಾಪ್ ಪ್ರಕರಣ ಹಾಗೂ ಕಡತ ನಾಪತ್ತೆ ಹಿಂದೆ ಇದೇ ಸ್ಯಾಂಟ್ರೋ ರವಿ ಪಾತ್ರವಿತ್ತೇ? ಎಂದು ಪ್ರಶ್ನಿಸಿದೆ.


[ays_poll id=3]