This is the title of the web page
This is the title of the web page
Politics NewsVideo News

ಬಿಜೆಪಿ ಅಭ್ಯರ್ಥಿ ಜಾತಿ ಪ್ರಮಾಣ ಪತ್ರ ವಿಚಾರ : ಏ.19 ಅಂತಿಮ ತೀರ್ಪು ಸಾಧ್ಯತೆ..


K2kannadanews.in

Political News ರಾಯಚೂರು : ರಾಯಚೂರು ಲೋಕಸಭಾ ಕ್ಷೇತ್ರದ (Raichur lok sabha Constituency) ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಎಸ್.ಟಿ (ST)ಗೆ ಸೇರಿದವರಲ್ಲ ಎಂಬ ಪ್ರಕರಣ ನ್ಯಾಯಾಲಯದಲ್ಲಿ (Court) ಇದ್ದು 19ನೇ ತಾರೀಕಿನಂದು ಅಂತಿಮ ತೀರ್ಪು (order) ಹೊರಬೀಳುವ ಸಾಧ್ಯತೆ ಇದ್ದು, ಅಭ್ಯರ್ಥಿ ಸೇರಿದಂತೆ ಹಲವು ಬಿಜೆಪಿ ನಾಯಕರಲ್ಲಿ ಕುತೂಹಲ ಮೂಡಿಸಿದ.

ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಾನ್ವಿ (manvi) ವಿಧಾನಸಭಾ ಕ್ಷೇತ್ರದ ನರಸಿಂಹ ನಾಯಕ ಎಂಬುವರಿಂದ ಕಲಬುರಗಿ ಉಚ್ಛ ನ್ಯಾಯಾಲಯದಲ್ಲಿ (kalburgi high Court) ದಾವೆ ಹೂಡಲಾಗಿತ್ತು. ಈ ಪ್ರಕರಣ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು 19ಕ್ಕೆ ಮುಂದೂಡಲಾಗಿದ್ದು, ಅಂದೆ ಕಲಬುರಗಿ ಹೈಕೋರ್ಟ್ ನಿಂದ ಅಂತಿಮ ತೀರ್ಪು ಬರೋ ಸಾಧ್ಯತೆ ಇದೆ.

ಶಾಲಾ ದಾಖಲಾತಿ (school document) ಪ್ರಕಾರ ರಾಜಾ ಕ್ಷತ್ರಿಯ ಎಂದು ರಾಜಾ ಅಮರೇಶ್ವರ ನಾಯಕ್ ಅಧಿಕಾರದ ಒತ್ತಡ ಹೇರಿ ಎಸ್.ಟಿ ಪ್ರಮಾಣ ಪತ್ರ (certificate) ಪಡೆದಿದ್ದಾರೆ ಎಂಬ ಆರೋಪದ (aligation) ಹಿನ್ನಲೆ, ನರಸಿಂಹ ನಾಯಕ ಎಂಬುವವರಿಂದ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಇನ್ನೂ ಮೂರನೇ ಹಂತದ ಚುನಾವಣೆಯ (3rd phase election) ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 19 ಕೊನೆ ದಿನದಂದೇ ತೀರ್ಪು ಪ್ರಕಟ ಹಿನ್ನೆಲೆ ಅಭ್ಯರ್ಥಿಗೆ ಸಂಕಷ್ಟ ಎದುರಾಗಿದೆ. ರಾಜಾ ಅಮರೇಶ್ವರ ನಾಯಕ್ 18ನೇ ತಾರೀಖು ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದಾರೆ.

ಒಂದು ವೇಳೆ ವ್ಯತಿರಿಕ್ತ ತೀರ್ಪು ಬಂದ್ರೆ ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯೇ ಇಲ್ಲದಂತಾಗೋದು ಪಕ್ಕಾ ಎಂಬಂತಾಗಿದೆ. ಹಾಗಾಗಿ ತೀರ್ಪು ಬರೋವರೆಗೂ ಅಮರೇಶ್ವರ ನಾಯಕ್ ಮತ್ತು ಪಕ್ಷದ ಮುಖಂಡರಲ್ಲಿ ತಳಮಳ ಉಂಟಾಗಿದೆ‌.

 


[ays_poll id=3]