
ರಾಯಚೂರು : ಕಳೆದ ಎರಡೂ ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ರೇಲ್ವೆ ಅಂಡರ್ ಪಾಸ್ನಲ್ಲಿ ನೀರು ತುಂಬಿಕೊಂಡು ನದಿಯಂತಾಗಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದೆಯುಂಟಾಗಿದೆ. ಅಸಮಾಧಾನ ಗೊಂಡ ವಾಹನ ಸವಾರನೋರ್ವ ತನ್ನ ಬೈಕ್ ಅನ್ನು ಹೆಗಲ ಮೇಲೆ ಹೊತ್ತುಕೊಂಡು ನೀರಿನಲ್ಲಿ ನಡೆದುಕೊಂಡು ಹೋಗಿದ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಹೌದು ಈ ಆಧುನಿಕ ಬಾಹುಬಲಿಯ ನಡಿಗೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ರಾಯಚೂರು ತಾಲೂಕಿನ ಕರೇಕಲ್ ಗ್ರಾಮದ ರೇಲ್ವೆ ಅಂಡರ್ ಪಾಸ್ನಲ್ಲಿ ನೀರು ತುಂಬಿಕೊಂಡು ನದಿಯಂತಾಗಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದೆಯುಂಟಾಗಿದೆ. ಇನ್ನು ಬೈಕ್ ಸವಾರನೋರ್ವ, ತನ್ನ ಬೈಕ್ ಅನ್ನು ಹೆಗಲ ಮೇಲೆ ಹೊತ್ತುಕೊಂಡು ನೀರಿನಲ್ಲಿ ನಡೆದು ಹೋಗಿದ್ದಾರೆ. ಕರೇಕಲ್ ಗ್ರಾಮದ ನಿವಾಸಿಯಾಗಿರುವ ಮೈಲಾರಲಿಂಗ, ತನ್ನ ಎಚ್ ಎಫ್ ಡೀಲಕ್ಸ್ ಬೈಕ್ ಹೆಗಲ ಮೇಲೆ ಹೊತ್ತೊಂಡು ಹೋಗಿದ್ದಾನೆ. ನೀರಿನಲ್ಲಿ ಈತ ನಡೆದುಕೂಂಡು ಹೊಂದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಆಧುನಿಕ ಬಾಹುಬಲಿ ಎಂದು ಕರೆದಿದ್ದಾರೆ.
![]() |
![]() |
![]() |
![]() |
![]() |
[ays_poll id=3]