This is the title of the web page
This is the title of the web page
State News

ಆಟೊ ಮತ್ತು ಬೈಕ್ ಮುಖಾಮುಖಿ: ಬೈಕ್ ಸವಾರ ಸಾವು..?


K2kannadanews.in

Accident News ಹಟ್ಟಿ : ಆಟೊ ಮತ್ತು ಬೈಕ್ ನಡುವೆ ಅಪಘಾತ (Auto and Bike Accident) ಸಂಭವಿಸಿದ ಬೈಕ್ ಸವಾರ ಸ್ಧಳದಲ್ಲೆ ಮೃತಪಟ್ಟ (spot death) ಘಟನೆ ಹೊಸೂರು ಕ್ರಾಸ್ ಬಳಿ ಜರುಗಿದೆ.

ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ಹಟ್ಟಿ(hatti)-ಹೊಸೂರು ಕ್ರಾಸ್ ಬಳಿ ಘಟನೆ ಜರುಗಿದೆ. ಗೌಡೂರು ಗ್ರಾಮದ ನಿವಾಸಿ ಶಿವರಾಜ(shivaraj 30) ಮೃತರು ಸ್ಥಳದಲ್ಲಿ ಮೃತಪಟ್ಟ ದುರ್ದೈವಿ. ಅಲ್ಲದೇ ಅಪಘಾತದಲ್ಲಿ ಆಟೊದಲ್ಲಿದ್ದ ಆದಪ್ಪ ಹಾಗೂ ಬೈಕ್‌ ಹಿಂಬದಿಯಲ್ಲಿ ಕುಳಿತಿದ್ದ ದೇವರಾಜ ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಿವರಾಜ, ಉಮಾದೇಶವಿ ಹಾಗೂ ದೇವರಾಜ ಅವರು ಗೌಡೂರು ಗ್ರಾಮದಿಂದ ಸಿರವಾರ (Sirawar) ಮಾರ್ಗದಲ್ಲಿ ಬೈಕ್ ಮೇಲೆ ಹೊರಟಿದ್ದರು. ಈ ವೇಳೆ ಹಟ್ಟಿ-ಹೊಸೂರು ಕ್ರಾಸ್ ಬಳಿ ಬೈಕ್ ಹಾಗೂ ಆಟೊ ಮುಖಾಮುಖಿ ಡಿಕ್ಕಿಯಾಗಿ (Head-on collision) ದುರ್ಘಟನೆ ಸಂಭವಿಸಿದೆ. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ (hatti police station) ಪ್ರಕರಣ ದಾಖಲಾಗಿದೆ.


[ays_poll id=3]