This is the title of the web page
This is the title of the web page
Politics NewsState News

ಖರ್ಗೆ ಮನೆ ಟಾಯ್ಲೆಟ್‌ ಕ್ಲೀನ್‌ ಮಾಡಲು ರೆಡಿ ಇದ್ದೀರಾ ಸೂಲಿಬೆಲೆ? : ರಮೇಶ್‌ ಬಾಬು ಪ್ರಶ್ನೆ


K2kannadanews.in

Congress Pressmeet : ಕಲಬುರಗಿಯಲ್ಲಿ (Kalaburagi) ನಿರ್ಮಿಸಲಾದ ಇಎಸ್ಐ ಆಸ್ಪತ್ರೆಯ (ESI Hospital) ವಿನ್ಯಾಸ ಖರ್ಗೆ ಎಂದು ಕನ್ನಡ ಅಕ್ಷರಗಳ ರೀತಿ ಕಾಣುವಂತೆ ರಚಿಸಲಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ (Chakravarthi Sulibele) ಮಾಡಿರುವ ಆರೋಪಕ್ಕೆ ಕಾಂಗ್ರೆಸ್‌ (Congress) ತಿರುಗೇಟು ನೀಡಿದೆ.

ಒಂದು ವೇಳೆ ಈ ಆರೋಪ ಸುಳ್ಳಾದಲ್ಲಿ ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಮನೆಯ ಶೌಚಾಲಯ ಸ್ವಚ್ಛಗೊಳಿಸಲು (Toilet clean) ಸಿದ್ದರಿದ್ದೀರಾ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ವಾಗ್ದಾಳಿ ನಡೆಸಿದ್ದಾರೆ. ಅನಂತ್‌ ಕುಮಾರ್‌ ಹೆಗ್ಗಡೆ, ಸೂಲಿಬೆಲೆ ಹಾಗೂ ಇನ್ನೂ ಅನೇಕ ಬಿಜೆಪಿ ನಾಯಕರು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಡಿ.ಕೆ. ಶಿವಕುಮಾರ್‌ ಟೀಕೆ ಮಾಡಿದರೆ ದೊಡ್ಡ ನಾಯಕರಾಗುತ್ತೇವೆ ಎಂದು ಕೊಂಡಿದ್ದಾರೆ. ಹಾಗಾಗಿ ಕೆಳ ಮಟ್ಟದ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ರಮೇಶ್‌ ಬಾಬು ಕಿಡಿಕಾರಿದರು.

ಇಎಸ್‌ಐ ಆಸ್ಪತ್ರೆಯ ಕಟ್ಟಡವೇನಾದರೂ ಕನ್ನಡ ವರ್ಣಮಾಲೆಯ ಖರ್ಗೆ ಅನ್ನುವ ಅಕ್ಷರಗಳನ್ನು ಹೋಲುವ ರೂಪದಲ್ಲಿ ನಿರ್ಮಿತವಾಗಿದ್ದರೆ. ನಾನು ಬಿಜೆಪಿಯ ದೊಡ್ಡ ನಾಯಕರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರ ಮನೆಯ ಶೌಚಾಲಯ ಶುಚಿಗೊಳಿಸಲು ಸಿದ್ಧನಿದ್ದೇನೆ. ಇಲ್ಲವಾದರೆ ಚಕ್ರವರ್ತಿ ಸೂಲಿಬೆಲೆಯವರೇ ನೀವು ಖರ್ಗೆಯವರ ಮನೆ ಶೌಚಾಲಯವನ್ನು ಶುಚಿಗೊಳಿಸುತ್ತೀರಾ? ಎಂದು ರಮೇಶ್‌ ಬಾಬು ಸವಾಲೆಸೆದಿದ್ದಾರೆ.


[ays_poll id=3]