
ರಾಯಚೂರು (Mantralaya) : 108 ಅಡಿ ಎತ್ತರದ ಶ್ರೀ ರಾಮದೇವರ ಪಂಚಲೋಹದ ಮೂರ್ತಿ ನಿರ್ಮಾಣಕ್ಕೆ ಕೇಂದ್ರದ ಗೃಹ ಖಾತೆ ಸಚಿವ ಅಮಿತ್ ಶಾ ಅವರು ವರ್ಚುವೆಲ್ ಮೂಲಕ ಶಂಕುಸ್ಥಾಪನೆ ಮಾಡಿದರು.
ಶ್ರೀರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶ್ರೀರಾಮ ಪಂಚಲೋಹ ಮೂರ್ತಿ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದರು. ನಂತರ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ವರ್ಚುವೆಲ್ ಮೂಲಕ ಸಾಂಕೇತಿಕವಾಗಿ ಶಂಕುಸ್ಥಾಪನೆ ನೆರವೇರಿಸಿ, ಹಿಂದೂ ಸಂಸ್ಕೃತದಲ್ಲಿ 108 ಸಂಖ್ಯೆ ಅತ್ಯಂತ ಪವಿತ್ರವಾಗಿದೆ. 108 ಅಡಿ ಎತ್ತರದ ಶ್ರೀರಾಮನ ಪಂಚಲೋಹದ ಮೂರ್ತಿ ನಿರ್ಮಿಸಲು ಮಂತ್ರಾಲಯದ ಮಠವು ಮುಂದಾಗಿರುವ ಶ್ಲಾಘನೀಯಎಂದು ಬಣ್ಣಿಸಿದರು. ಪವಿತ್ರವಾದ ತುಂಗಾಭದ್ರಾ ನದಿ ತೀರದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳು ನೆಲೆಸಿದ್ದಾರೆ. ಇದೀ ನದಿಯ ಹಂಚಿನಲ್ಲಿ ಇದೀಗ ಶ್ರೀರಾಮ ದೇವರ 108ಅಡಿ ಉದ್ದದ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಮೂರ್ತಿ ಸನಾತನ ಧರ್ಮವನ್ನು ಎಲ್ಲೆಡೆ ಪಸರಿಸಲಿ, ವೈಷ್ಣವ ಪರಂರತೆಯನ್ನು ಬೆಳಗಲಿ’ ಎಂದು ಹಾರೈಸಿದರು.
ನಂತರ ಅನುಗ್ರಹ ಸಂದೇಶ ನೀಡಿದ ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು, ಶ್ರೀ ರಾಮದೇವರ ಕುಳಿತ ಶಿಲೆಯಲ್ಲಿಯೇ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲಬೃಂದಾವನ ನಿರ್ಮಿಸಲಾಗಿದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧ್ಯದೈವರಾದ ಶ್ರೀ ರಾಮಚಂದ್ರ ದೇವರ 108 ಅಡಿ ಉದ್ದದ ಪಂಚಲೋಹ ಮೂರ್ತಿ ನಿರ್ಮಾಣವನ್ನು ಕೈಗೊಳ್ಳಲಾಗಿದೆ. ಭವ್ಯವಾದ ಮೂರ್ತಿ, ಮಂದಿರ, ಸುತ್ತಲು ಉದ್ಯಾನ ಹಾಗೂ ಸನಾತನ ಧರ್ಮ, ಹಿಂದೂ ಸಂಸ್ಕೃತಿಯನ್ನು ಬಿಂಬಿಸುವ ಕಟ್ಟಡವನ್ನು ನಿರ್ಮಿಸಲು ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.
![]() |
![]() |
![]() |
![]() |
![]() |
[ays_poll id=3]