ಸಹಾಯಕ ಆಯುಕ್ತರ ವಜಕ್ಕೆ ವಕೀಲರ ಅಗ್ರ
![]() |
![]() |
![]() |
![]() |
![]() |
ರಾಯಚೂರು : ಜಿಲ್ಲೆಯ ಸಹಾಯಕ ಆಯುಕ್ತರಾದ ರಜನಿಕಾಂತ್ ಚೌಹಾಣ್ ಅವರನ್ನು ವಜಾ ಮಾಡಬೇಕೆಂದು ಆಗ್ರಹಿಸಿ ರಾಯಚೂರು ನ್ಯಾಯವಾದಿಗಳ ಸಂಘ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರಾಯಚೂರಿನ ಸಹಾಯಕ ಆಯುಕ್ತರು ಆದೇಶಗಳನ್ನು ಗಾಳಿಗೆ ತೂರಿ ತಮ್ಮದೇ ಆದ ರೀತಿಯಲ್ಲಿ ಪ್ರಕರಣಗಳನ್ನು ನಡೆಸುತ್ತಿದ್ದಾರೆ ಎಂದು ದೂರಿದರು. ಸಹಾಯಕ ಆಯುಕ್ತರು ತಾವೇ ನಿಗದಿಪಡಿಸಿರುವ ಪ್ರಕರಣಗಳ ಸಮಯಕ್ಕೆ ಸರಿಯಾಗಿ ಬಾರದೆ ನೋಟಿಸಿನಲ್ಲಿ 3 ಎಂದು ತಿಳಿಸಿ 3.30 ನಾಲ್ಕು ಗಂಟೆಗೆ ಬರುತ್ತಿದ್ದಾರೆ. ಬಂದ ನಂತರ ಯಾವ ಕಾರಣಕ್ಕಾಗಿ ತಡವಾಗಿ ಬಂದಿದ್ದಾರೆ ಎಂದು ತಿಳಿಸುವುದಿಲ್ಲ. ತೆರೆದ ನ್ಯಾಯಾಲಯದಲ್ಲಿ ದೂರವಾಣಿ ಕರೆಗಳನ್ನು ಸ್ವೀಕರಿಸಿ ಗಂಟೆಗಟ್ಟಲೆ ನ್ಯಾಯ ಸ್ಥಾನದಲ್ಲಿ ಕುಳಿತು ಮಾತನಾಡುತ್ತಾರೆ. ಕಕ್ಷಿದಾರರ ಪ್ರಕರಣಗಳನ್ನು ನಿಗದಿಯಾಗದ ಹಾಜರಾದರೆ ತುರ್ತು ಕೆಲಸ ಇದೆ ಎಂದು ರದ್ದು ಮಾಡಿ ಮುಂದೂಡಲಾಗುತ್ತದೆ. ಇದರಿಂದ ವಕೀಲರಿಗೆ ಮತ್ತು ಕಕ್ಷಿದಾರರಿಗೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಹಾಯಕ ಆಯುಕ್ತರ ಕಚೇರಿಯ ಸಿಬ್ಬಂದಿಗಳು ವಕೀಲರಿಗೆ ಮತ್ತು ಕಕ್ಷಿದಾರರಿಗೆ ಸರಿಯಾದ ಮಾಹಿತಿ ನೀಡದೇ ಅಗೌರವದಿಂದ ವರ್ತಿಸುತ್ತಿದ್ದಾರೆ. ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಕಾನೂನು ಬದ್ಧವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಖಂಡಿಸಿದರು. ಸಹಾಯಕ ಆಯುಕ್ತರನ್ನು ವಜಾ ಗೊಳಿಸುವವರೆಗೆ ಜಿಲ್ಲಾಧಿಕಾರಿಗಳು ಸಹಾಯಕ ಆಯುಕ್ತರ ಯಾವುದೇ ಪ್ರಕರಣಗಳನ್ನು ನಡೆಸದಂತೆ ಹಾಗೂ ಈಗಿರುವ ಪ್ರಕರಣಗಳಲ್ಲಿ ಯಾವುದೇ ರೀತಿ ಆದೇಶಗಳನ್ನು ಮಾಡದಂತೆ ನಿರ್ದೇಶಿಸಬೇಕೆಂದು ಒತ್ತಾಯಿಸಿದರು.
![]() |
![]() |
![]() |
![]() |
![]() |