
K2 ಪೊಲಿಟಿಕಲ್ ನ್ಯೂಸ್ : 2013ರಲ್ಲಿ ಜರುಗಿದ ವಿಧಾನಸಭೆ ಚುನಾವಣೆಗೆ ರಾಯಚೂರು ನಗರ ಕ್ಷೇತ್ರದಿಂದ ನಟಿ ಪೂಜಾ ಗಾಂಧಿ ಸ್ಪರ್ಧೆ ಮಾಡುವ ಮೂಲಕ ತಾರಾ ಮೆರುಗು ತಂದಿದ್ದರು. ಆದರೆ, ಮತದಾರರು ಮಾತ್ರ ಪೂಜಾ ಗಾಂಧಿ ಠೇವಣಿ ಕಳೆದುಕೊಳ್ಳುವಂತೆ ಮಾಡಿದ್ದರು.
ಬಿಜೆಪಿ ತೊರೆದು ಬಿಎಸ್‌ಆರ್ ಪಕ್ಷವನ್ನು ಹುಟ್ಟು ಹಾಕಿದ್ದ ಬಿ.ಶ್ರೀರಾಮುಲು ರಾಯಚೂರು ನಗರ ಕ್ಷೇತ್ರಕ್ಕೆ ನಟಿ ಪೂಜಾ ಗಾಂಧಿಯನ್ನು ಪಕ್ಷದಿಂದ ನಿಲ್ಲಿಸಿದ್ದರು. ಪೂಜಾ ಗಾಂಧಿ ಕೂಡ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಭರ್ಜರಿ ಪ್ರಚಾರ ಕಾರ್ಯ ಮಾಡಿದ್ದರು. ಪೂಜಾ ಗಾಂಧಿ ಹೋದಲ್ಲೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರ ಜತೆಗೆ ಮುಗಿಬಿದ್ದು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಚುನಾವಣೆ ಪ್ರಚಾರಕ್ಕೆ ಬಿ.ಶ್ರೀರಾಮುಲು ಮತ್ತು ಮಾಜಿ ಸಂಸದ ಫಕ್ಕೀರಪ್ಪ ಆಗಮಿಸಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುವ ಮೂಲಕ ಪೂಜಾ ಗಾಂಧಿ ಗೆಲುವಿಗೆ ಪ್ರಯತ್ನ ನಡೆಸಿದ್ದರು. ಬೀರು ಬಿಸಿಲಿನಲ್ಲಿಯೂ ಪೂಜಾ ಗಾಂಧಿ ನಿರಂತರವಾಗಿ ಸಂಚರಿಸಿ ಪ್ರಚಾರ ಕಾರ್ಯ ರಾಜಕೀಯ ಪುಟದಲ್ಲಿ ಸೇರಿದೆ.
ಗೆಲ್ಲಲು ಸಾಧ್ಯವಾಗದಿದ್ದರೂ ಪೂಜಾ ಗಾಂಧಿಗಿದ್ದ ತಾರಾ ಮೆರುಗಿನಿಂದಾಗಿ ಹೆಚ್ಚಿನ ಮತಗಳನ್ನು ಪಡೆಯುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಕ್ಷೇತ್ರದ ಮತದಾರರು ಮಾತ್ರ ನಟಿಗೆ ಮಣೆ ಹಾಕಲಿಲ್ಲ. ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವಂತೆ ಮತದಾರರು ತೀರ್ಪು ನೀಡಿದ್ದು ಈಗ ಇತಿಹಾಸ. 2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಡಾ.ಶಿವರಾಜ ಪಾಟೀಲ್ 45,263 ಮತಗಳನ್ನು ಪಡೆದು ಜಯಗಳಿಸಿದರೆ, ಕಾಂಗ್ರೆಸ್‌ನ ಸೈಯದ್ ಯಾಸೀನ್ 37,392 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಬಿಎಸ್‌ಆರ್‌ನಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ ಕೇವಲ 1,815 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ತ್ರಿವಿಕ್ರಮ ಜೋಷಿ ಸೇರಿ ಕಣದಲ್ಲಿದ್ದ 19 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.
![]() |
![]() |
![]() |
![]() |
![]() |
[ays_poll id=3]