
K2 ಕ್ರೈಂ ನ್ಯೂಸ್ : ರಾಷ್ಟೀಯ ಹೆದ್ದಾರಿ 150A ರಲ್ಲಿ ರಾಯಚೂರು ವಿಭಾಗಕ್ಕೆ ಸೇರಿದ ಕೆಕೆಆರ್ಟಿಸಿ ಸಾರಿಗೆ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ನಾಲ್ವರು ಮೃತಪಟ್ಟ ಭೀಕರ ಘಟನೆ ನಡೆದಿದೆ.
ಹೌದು ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಗೊಲ್ಲಹಳ್ಳಿ ಬಳಿ ಬೆಳಗಿನ ಜಾವ ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗೊಲ್ಲಹಳ್ಳಿ ಗ್ರಾಮದ
ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ, ಕೆಕೆಆರ್ಟಿಸಿ ಸಾರಿಗೆ ಬಸ್ ಲಾರಿ ನಡುವೆ ನಡೆದಿರೋ ಭೀಕರ ಅಪಘಾತ ಜರುಗಿದ. ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ಪಾರ್ವತಮ್ಮ (45), ರಾಯಚೂರು ಮೂಲದ ರಮೇಶ್ (40), ನರಸಪ್ಪ (05), ರವಿ (23), ಮಾಬಮ್ಮ (35), ಮೃತಪಟ್ಟಿದ್ದಾರೆ.
ಇನ್ನೂ ಬಸ್ ಮತ್ತು ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದರು. ಇನ್ನೋರ್ವ ಮಹಿಳೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು, ಉಳಿದ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಚಲಿಸುತ್ತಿದ್ದ ಬಸ್ ಏಕಾಏಕಿ ಲಾರಿಗೆ ಡಿಕ್ಕಿ ಹೊಡೆದೆ. ವೇಗವಾಗಿ ಚಲಿಸುತ್ತಿತ್ತು, ಚಾಲಕ ನಿದ್ದೆ ಗಣ್ಣಿನಲ್ಲಿ ಇದ್ದಿದ್ದರಿಂದ ಈ ರೀತಿಯ ಘಟನೆ ಜರುಗಿರಬಹುದು ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.
![]() |
![]() |
![]() |
![]() |
![]() |
[ays_poll id=3]