This is the title of the web page
This is the title of the web page
Crime NewsNational News

ಕೋಚಿಂಗ್ ಕ್ಲಾಸ್ ಕೇಳುತ್ತಿದ್ದಾಗ ವಿದ್ಯಾರ್ಥಿ ಹಾಟ್ ಅಟ್ಯಾಕ್ ನಿಂದ ಸಾವು..!


K2kannadanews.in

HEART ATTACK : ಇತ್ತೀಚಿನ ದಿನಗಳಲ್ಲಿ ಸಾವು, ಅದರಲ್ಲೂ ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ಹೃದಯಾಘಾತ ಅನ್ನೋದು ಸಾಮಾನ್ಯವಾಗಿದೆ. ಇಲ್ಲೊಂದು ಕೋಚಿಂಗ್‌ ತರಗತಿಯ ವೇಳೆ ವಿದ್ಯಾರ್ಥಿಯೊಬ್ಬ (Student) ಹೃದಯಾಘಾತದಿಂದ (Heart Attack) ಮೃತಪಟ್ಟ ಘಟನೆ ನಡೆದಿದೆ.

ಮಧ್ಯಪ್ರದೇಶದ ಇಂದೋರ್‌ನ (Indore) ಭನ್ವಾರ್ಕುವಾನ್ ಪ್ರದೇಶದ ನಿವಾಸಿ ಮಾಧವ್ (18) ಮೃತ ವಿದ್ಯಾರ್ಥಿ. ಈತ ಮಧ್ಯಪ್ರದೇಶ ಲೋಕಸೇವಾ ಆಯೋಗದ (MPPSC) ಪ್ರವೇಶ ಪರೀಕ್ಷೆಗೆ (Entrance exam) ಓದುತ್ತಿದ್ದ.

ಇದಕ್ಕಾಗಿ ಕೋಚಿಂಗ್ (Coaching) ಪಡೆಯುತ್ತಿದ್ದ. ಮಾಧವ್‌ ತರಗತಿಗೆ ಹಾಜರಾಗಿದ್ದಾಗ ದಿಢೀರ್‌ ಆಗಿ ಎದೆನೋವು ಕಾಣಿಸಿಕೊಂಡಿದೆ.

ಅದಾದ ಬಳಿಕ ಮಾಧವ್‌ ಮೇಜಿನ ಮೇಲೆಯೇ ಮಲಗಿದ್ದಾರೆ. ಪಕ್ಕದಲ್ಲಿ ಕುಳಿತ ಯುವಕನೊಬ್ಬ ಮಾಧವ್‌ ಅನರೋಗ್ಯದಿಂದ ಬಳಲುತ್ತಿರುವುದಾಗಿ ಅಲ್ಲಿಯ ಶಿಕ್ಷಕನಿಗೆ ತಿಳಿಸಿದ್ದಾರೆ. ಅದಾದ ಕೆಲವು ಸೆಕೆಂಡ್‌ಗಳಲ್ಲೇ ಮಾಧವ್‌ ಕುಸಿದು ಮೇಜಿನಿಂದ ನೆಲಕ್ಕೆ ಬಿದ್ದಿದ್ದು ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಘಟನೆಯ ದೃಶ್ಯ ತರಗತಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


[ays_poll id=3]