
ರಾಯಚೂರು : ಶಾಸಕಾಂಗ ಸಭೆಯಲ್ಲಿ ಎಲ್ಲ ಶಾಸಕರು ಮನಸ್ಸು ಬಿಚ್ಚಿ ಮಾತನಾಡಿದಾರೆ. ಹೊಸದಾಗಿ ಇವತ್ತು ಸರ್ಕಾರ ರಚನೆಯಾಗಿದೆ. ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.
ಸರ್ಕಾರಕ್ಕೆ ಎಲ್ಲಾ ಶಾಸಕರು ಹೇಗೆ ಬೆಂಬಲ ನೀಡ್ತಿದ್ದಾರೆ ಎಂಬ ವಿಚಾರಕ್ಕೆ ಮಾತನಾಡಿದ ಸಚಿವರು, ಶಾಸಕಾಂಗ ಸಭೆಯಲ್ಲಿ ಎಲ್ಲಾ ಶಾಸಕರು ಮನಸ್ಸು ಬಿಚ್ಚಿ ಮಾತನಾಡಿದಾರೆ. ಹೊಸದಾಗಿ ಇವತ್ತು ಸರ್ಕಾರ ರಚನೆಯಾಗಿದೆ. ಸರ್ಕಾರ ರಚನೆಯಾಗಿ ಮೂರು ವಾರಗಳಲ್ಲಿ ಅಧಿವೇಶನ ನಡೆಯಿತು. ಹಾಗಾಗಿ ಎಲ್ಲಾ ಸಚಿವರುಗಳು ಅದರಲ್ಲಿ ಬ್ಯುಸಿ ಆಗಿದ್ರು. ಹಾಗಾಗಿ ಕೆಲವೊಂದು ಕೆಲಸ ಕಾರ್ಯಗಳು ಆಗಿಲ್ಲ ಎಂಬುದು ಕೆಲವು ಶಾಸಕರ ಅಭಿಪ್ರಾಯವಾಗಿತ್ತು. ಇವತ್ತು ಶಾಸಕರುಗಳಿಗೆ ಸ್ಪಂದಿಸುವಂತಹ ಕೆಲಸವನ್ನ ಎಲ್ಲ ಸಚಿವರು ಮಾಡಿದಾರೆ. ಹಾಗಾಗಿ ಅಂತಹ ಅಸಮಾಧಾನ ಏನೂ ಇಲ್ಲ. ಶಾಸಕರಿಗೆ ಸ್ವಲ್ಪ ತ್ವರಿತಗತಿಯಲ್ಲಿ ಕೆಲಸ ಆಗಬೇಕು ಎಂಬ ಮನವಿ ಇದೆ.
![]() |
![]() |
![]() |
![]() |
![]() |
[ays_poll id=3]