This is the title of the web page
This is the title of the web page
Local News

ಬಂಗಾರವಾದ ತರಕಾರಿ, ಗ್ರಾಹಕರ ಜೇಬಿಗೆ ಕತ್ತರಿ


ರಾಯಚೂರು : ಮುಂಗಾರು ಮಳೆಯ ವಿಳಂಬದ ಕಾರಣಕ್ಕೆ ಹಣ್ಣು ತರಕಾರಿಗಳ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ತರಕಾರಿ ಹಣ್ಣುಗಳಿಗೆ ಬಂಗಾರದ ಬೆಲೆ ಬಂದಿದೆ. 10 ರೂಪಾಯಿ ಇದ್ದ ತರಕಾರಿ ಬೆಲೆಗಳು ನೂರು ರೂಪಾಯಿ ಗಡಿ ದಾಟಿವೆ.

ಹೌದು ಮುಂಗಾರು ಆರಂಭವಾಗಿ ಹಲವು ದಿನಗಳು ಕಳೆದರೂ ಗುಣ ವರುಣನ ದರ್ಶನವೇ ಆಗಿಲ್ಲ. ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟ ಗ್ರಾಹಕರಿಗೆ ಮತ್ತೆ ಕಾಯದ ಮೇಲೆ ಬರೆ ಎಳೆದಂತೆ ಕೇವಲ ಒಂದು ವಾರದ ಅವಧಿಯಲ್ಲಿ ಕೆಲ ತರಕಾರಿಗಳ ಬೆಲೆ 10 ರೂಪಾಯಿಗಳಿಂದ 50 ರೂಪಾಯಿಗಳವರೆಗೆ ಏರಿಕೆಯಾಗಿದ್ದು, ತರಕಾರಿ ಖರೀದಿಗೆ ಮಾರುಕಟ್ಟೆಗೆ ಹೋಗುವ ಗ್ರಾಹಕರು ಜೇಬಿಗೆ ಕತ್ತರಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ತ ಹಣ್ಣುಗಳ ಬೆಲೆಯಲ್ಲೂ ಸಹ ಏರಿಕೆಯಾಗಿದ್ದು, ತಿನ್ನಲು ಹಿಂದೆ ಮುಂದೆ ನೋಡುವಂತಾಗಿದೆ.

K2ಕೆಜಿಗೆ 80 ರೂಪಾಯಿಗಳಿದ್ದ ಬೀನ್ಸ್ ದರ ಈಗ 140 ರೂಪಾಯಿ ಆಸುಪಾಸಿನಲ್ಲಿದ್ದು, 40 ರೂಪಾಯಿಗಳಿದ್ದ ಕ್ಯಾರೆಟ್ ಈಗ 100 ರೂ. ತಲುಪಿದೆ. ಇನ್ನು 30 ರೂಪಾಯಿ ಇದ್ದ ಟೊಮೊಟೊ 90 ರೂಪಾಯಿ ತಲುಪಿದ್ದು, 50 ರೂಪಾಯಿ ಇದ್ದ ಮೆಣಸಿನ ಕಾಯಿ 120 ರೂಪಾಯಿ ಮುಟ್ಟಿದೆ. ಹಣ್ಣಿನ ಬೆಲೆಯಲ್ಲೂ ಏರಿಕೆಯಾಗಿದ್ದು ಕೆಜಿಗೆ 180 ರೂ. ಇದ್ದ ಸೇಬಿನ ದರ ಈಗ 220 ರಿಂದ 260 ರೂ. ತಲುಪಿದ್ದು ಗ್ರಾಹಕರು ಏನೇ ಖರೀದಿ ಮಾಡಬೇಕಾದರೂ ಕೂಡ ಹಿಂದು ಒಂದು ಯೋಚನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.


[ays_poll id=3]