
ರಾಯಚೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಯಾಗಿರುವ, ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯದ ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಉಚಿತ ಬಸ್ ಸೌಲಭ್ಯದ ಲಾಭ ಪಡೆದುಕೊಳ್ಳುತ್ತಿದ್ದಾರೆ. ಆದರೆ ರಾಯಚೂರು ಜಿಲ್ಲೆಯ ಈ ಗ್ರಾಮಗಳ ಮಹಿಳೆಯರು ಬಸ್ ಸೌಲಭ್ಯದಿಂದ ವಂಚಿತಗೊಂಡು ಶಕ್ತಿ ಯೋಜನೆಯಿಂದ ಲಾಭ ಪಡೆಯದೆ ಸರ್ಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ.
ರಾಯಚೂರು ಜಿಲ್ಲೆಯ ಈ ಒಂದು ಹಳ್ಳಿಗಳು ರಸ್ತೆ ಇಲ್ಲದೆ, ಇಕ್ಕಟ್ಟಾದ ಹಾಗೂ ಹದಗೆಟ್ಟಿರುವ ರಸ್ತೆಯಿಂದಾಗಿ 5 ಗ್ರಾಮಗಳಿಗೆ ಬಸ್ ಸಂಚಾರ ಇಲ್ಲದೆ ಇರುವುದರಿಂದ ಈ ಗ್ರಾಮಗಳ ಮಹಿಳೆಯರಿಗೆ ಈ ಉಚಿತ ಬಸ್ ಸೌಲಭ್ಯ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ರಾಯಚೂರು ತಾಲೂಕಿನ ಅಗ್ರಹಾರ ಗ್ರಾಮ ಮತ್ತು ಕುರ್ವಕುಲಂ ಗ್ರಾಮಗಳಿಗೆ ಕೃಷ್ಣಾ ನದಿ ಅಡ್ಡ ಇರುವುದರಿಂದ ಅತ್ಕೂರವರೆಗೆ ಬಸ್ ಸೌಲಭ್ಯ ಒದಗಿಸಲಾಗಿದೆ. ಕುರ್ವಕುರ್ದಾ ಗ್ರಾಮಕ್ಕೆ ಕೃಷ್ಣಾ ನದಿ ಅಡ್ಡ ಇರುವುದರಿಂದ ಡೊಂಗರಾಪುರದವರೆಗೆ ಸಾರಿಗೆ ಸೌಲಭ್ಯ ಒದಗಿಲಾಗಿದೆ. ಅರಳಪ್ಪನ ಹುಡಾ ಗ್ರಾಮದಲ್ಲಿ ಬಂಡಿ ರಸ್ತೆ ಇರುವುದರಿಂದ ಬಸ್ ಇಲ್ಲ.
ದೇವದುರ್ಗ ತಾಲೂಕಿನ ಸೂಲಗುಡ್ಡ ಗ್ರಾಮದಲ್ಲಿ ಕಚ್ಚಾ ರಸ್ತೆ ಇದೆ. ಗಲಗವರೆಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಹೀಗೆ ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನಲ್ಲಿ ನಾಲ್ಕು ಗ್ರಾಮಗಳು, ದೇವದುರ್ಗ ತಾಲೂಕಿನಲ್ಲಿ ಒಂದು ಒಟ್ಟು ಜಿಲ್ಲೆಯಲ್ಲಿ 5 ಗ್ರಾಮಗಳಿಗೆ ಬಸ್ ಸೌಲಭ್ಯ ಇಲ್ಲದೆ ಮಹಿಳೆಯರು ಈ ಒಂದು ಯೋಜನೆಯಿಂದ ವಂಚಿತರಾಗಿದ್ದಾರೆ. ಈ ಒಂದು ಯೋಜನೆ ಹೊರತುಪಡಿಸಿದರೂ ಕೂಡ ಹಲವು ವರ್ಷಗಳಿಂದ ಈ ಒಂದು ಗ್ರಾಮಗಳು ಬಸ್ಸನ್ನೇ ನೋಡಿಲ್ಲ.
![]() |
![]() |
![]() |
![]() |
![]() |
[ays_poll id=3]