This is the title of the web page
This is the title of the web page
Politics NewsState News

ರೈತರ ಖಾತೆಗೆ ಬರ ಪರಿಹಾರದ ಮೊದಲ ಕಂತು 2000 ಸಂದಾಯವಾಗಲಿದೆ..!


K2kannadanews.in

ನ್ಯೂಸ್ ಡೆಸ್ಕ್: ಮಳೆಕೊರತೆ(relief), ಬರಗಾಲ (Drought), ಹಿನ್ನಲೆ ಬೆಳೆ(crops) ಕಳೆದುಕೊಂಡ ಅರ್ಹ ರೈತರಿಗೆ(farmers) ತಲಾ 2,000 ರೂಪಾಯಿ ಪರಿಹಾರ(solution) ಹಣ ಬಿಡುಗಡೆ ಮಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ(CM Siddaramahia) ಘೊಷಣೆ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಬರ ಪರಿಹಾರದ ಮೊದಲ ಕಂತು ಸಂದಾಯವಾಗಲಿದೆ ಎಂದು ಸಿಎಂ ಹೇಳಿದ್ದರೆ.

ಇನ್ನೂ ಕೇಂದ್ರ ಸರ್ಕಾರ(central government) ರಾಜ್ಯದ ರೈತರಿಗೆ ಪರಿಹಾರ ಕೊಡಲು, ಪ್ರಾಥಮಿಕ ಸಭೆ(Preliminary meeting) ನಡೆಸದಿರುವುದು ಶೋಚನೀಯ ಎಂದು ಸಿಎಂ ಅಸಮಧಾನ(disapproving) ಹೊರಹಾಕಿದ್ದಾರೆ. ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಮೂರು ಹಂತದಲ್ಲಿ ಘೋಷಿಸಲಾಗಿದೆ. ಒಟ್ಟು 18,1710 ಕೋಟಿ(crore) ರೂಪಾಯಿ ಪರಿಹಾರ ಆರ್ಥಿಕ ನೆರವು(Financial assistance) ನೀಡಲು ಕೇಂದ್ರಕ್ಕೆ ಪತ್ರ(later) ಬರೆಯಲಾಗಿದೆ. ಕೇಂದ್ರದ ತಂಡ ಅಕ್ಟೋಬರ್ 4 ರಿಂದ 9ರ ವರೆಗೆ ರಾಜ್ಯ ಪ್ರವಾಸ ಮಾಡಿ ಬರ ಸಮೀಕ್ಷೆ ನಡೆಸಿ, ವರದಿ ನೀಡಿದೆ. 48.19 ಲಕ್ಷ ಹೆಕ್ಟೇ‌ರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ರೂ.4,663 ಕೋಟಿ ಬೆಳೆ ನಷ್ಟ ಪರಿಹಾರ ಕೇಂದ್ರಕ್ಕೆ ಕೇಳಿದ್ದೆವು. ಕೇಂದ್ರ ಕೃಷಿ ಮತ್ತು ಗೃಹ ಸಚಿವರನ್ನು ಭೇಟಿಅಡಲು ಸಮಯ ಕೊಡಿ ಎಂದು ಪತ್ರ ಬರೆದಿದ್ದೆ. ಇವತ್ತಿನವರೆಗೂ ಸಮಯ ಕೊಟ್ಟಿಲ್ಲ ಎಂದು ಸಿಎಂ ವಿವರಿಸಿದರು.

ಬಿತ್ತನೆ ವೈಫಲ್ಯ(Sowing failure) ಮತ್ತು ಮಧ್ಯಂತರ ವಿಮೆ(Intermediate Insurance) ಪರಿಹಾರಕ್ಕೆ ರೈತರಿಗೆ 460 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಕುಡಿಯುವ ನೀರು(drinking water), ಮೇವಿಗೆ 327 ಕೋಟಿ ಬಿಡುಗಡೆ ಮಾಡಲಾಗಿದೆ. 780 ರೂಪಾಯಿ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿದೆ. ಕುಡಿಯುವ ನೀರು ಸಮಸ್ಯೆಯಾಗದಂತೆ ನಿರ್ವಹಣೆ ಮಾಡುತ್ತಿದ್ದೇವೆ. ಬರ ಪರಿಹಾರದ ಸಂಬಂಧ ಕೇಂದ್ರಕ್ಕೆ‌ ಬರೆದ ಪತ್ರಗಳಿಗೆ, ಈ ವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯದಿಂದ ಮೂವರು ಸಚಿವರು ದೆಹಲಿಗೆ(dhelli) ಹೋದರೂ ಸಕಾರಾತ್ಮಕ ಪ್ರತಿಕ್ರಿಯೆ(positive response) ಸಿಕ್ಕಿಲ್ಲ. ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಪರಿಹಾರ ಕೊಡಲು ಇನೂ ಪ್ರಾಥಮಿಕ ಸಭೆಯನ್ನು ಕರೆದಿಲ್ಲ. ರಾಜ್ಯದಿಂದ ತುರ್ತು ಕ್ರಮ ಕೈಗೊಳ್ಳಲಾಗಿದ್ದು, ಮೊದಲ ಕಂತಿನ ಪರಿಹಾರವಾಗಿ 2000 ರೂಪಾಯಿ ಅರ್ಹ ರೈತರ ಖಾತೆಗೆ ವರ್ಗಾವಣೆ ಮಾಡಲು ಸರಕಾರ ಸಿದ್ಧವಾಗಿದೆ ಎಂದರು.

 


[ays_poll id=3]