This is the title of the web page
This is the title of the web page
Politics News

ರಾಯಚೂರು ಜಿಲ್ಲೆಯಲ್ಲಿ 16.18 ಲಕ್ಷ ಮತದಾರ : ಖರ್ಚುವೆಚ್ಚದ ಮೇಲೆ ಆಯೋಗ ಹದ್ದಿನ ಕಣ್ಣು


K2 ಎಲೆಕ್ಷನ್ ನ್ಯೂಸ್ : 2023ರ ವಿಧಾನಸಭಾ ಚುನಾವಣೆಗೆ ರಾಯಚೂರು ಜಿಲ್ಲೆಯಾದ್ಯಂತ ಮಾರ್ಚ್‌ 29ರಿಂದ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಆದ್ದರಿಂದ ಯಾವುದೇ ಕಾರ್ಯಕ್ರಮಗಳು, ಪ್ರತಿಭಟನೆಗಳನ್ನು ನಡೆಸುವುದಕ್ಕೆ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾ ಚುನಾವಣಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಸೂಚನೆ ನೀಡಿದ್ದಾರೆ.

* ಜಿಲ್ಲೆಯಲ್ಲಿರುವ ಮತಗಟ್ಟೆಗಳ ವಿವರ : ಜಿಲ್ಲೆಯಲ್ಲಿ ಒಟ್ಟು 1,840 ಮತಗಟ್ಟೆಗಳಿದ್ದು, ಎಲ್ಲ ಕಡೆಗಳಲ್ಲೂ ಮೂಲ ಸೌಲಭ್ಯಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟು 16.18 ಲಕ್ಷ ಮತದಾರರಿದ್ದು, ಅದರಲ್ಲಿ 7.9 ಲಕ್ಷ ಪುರುಷ ಮತದಾರರು, 8.21 ಲಕ್ಷ ಮಹಿಳಾ ಮತದಾರರು ಹಾಗೂ 260 ತೃತೀಯ ಲಿಂಗಿ ಮತದಾರರಿದ್ದಾರೆ. ಹಾಗೆಯೇ 13 ಅನಿವಾಸಿ ಭಾರತೀಯ ಮತದಾರರು ಮತ್ತು 281 ಅಂಚೆ ಮತದಾರರು ಇದ್ದಾರೆ.

* ಮತದಾರರ ವಿವರ ಇಲ್ಲಿದೆ : ಮತದಾನ ನಡೆಯುವ ಮೇ 10ರ ಎರಡು ದಿನಗಳ ಮೊದಲು ಮತದಾರ ಚೀಟಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದು. ಹೊಸ ಸೇರ್ಪಡೆ, ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು. 18,071 ಅಂಗವಿಕಲ ಮತದಾರರಿದ್ದಾರೆ. 24 ಸಾವಿರ ಮತದಾರರು 80 ವರ್ಷ ಮೇಲ್ಪಟ್ಟವರಿದ್ದಾರೆ. ಅಂಗವಿಕಲರು ಹಾಗೂ 80 ವರ್ಷ ಮೇಲ್ಪಟ್ಟವರಿಗೆಲ್ಲ 12ಬಿ ಅರ್ಜಿ ನಮೂನೆ ಒದಗಿಸಲಾಗುವುದು. ಅಗತ್ಯ ಏನಿಸಿದವರು ಅರ್ಜಿ ಸಲ್ಲಿಸಿದರೆ ಚುನಾವಣಾ ಸಿಬ್ಬಂದಿ ಅವರ ಮನೆಗಳಿಗೇ ತೆರಳಿ ಮತದಾನ ಸಂಗ್ರಹಿಸಿಕೊಳ್ಳಲಿದ್ದಾರೆ ಎಂದರು.

* ಗುಪ್ತ ಮತದಾನ : ಮತದಾನ ನಡೆಯುವ ಐದು ದಿನಗಳ ಮೊದಲೇ ಅಂಗವಿಕಲ ಮತ್ತು ವಯಸ್ಸಾದವರಿಂದ ಮತಗಳನ್ನು ಸಂಗ್ರಹಿಸಲಾಗುವುದು. ಇದು ಕೂಡ ಗುಪ್ತ ಮತದಾನ ಆಗಿರುತ್ತದೆ ಎಂದು ಹೇಳಿದರು. ಪ್ರತಿಯೊಂದು ವಿಧಾನಸಭೆ ಕ್ಷೇತ್ರಕ್ಕೆ ಚುನಾವಣಾ ಅಧಿಕಾರಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿಯನ್ನು ನೇಮಿಸಲಾಗಿದ್ದು, ಅಲ್ಲದೆ ಚುನಾವಣೆ ನೀತಿ ಸಂಹಿತೆ ಕುರಿತು ನಿಗಾ ವಹಿಸಲು 68 ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

* ಖರ್ಚು ವೆಚ್ಚದ ಮೇಲೆ ತೀವ್ರನಿಗ : ಅಭ್ಯರ್ಥಿಗಳ ಖರ್ಚು ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತು ಮೊತ್ತ ಇತ್ಯಾದಿ ಅಂಕಿ ಸಂಖ್ಯೆಗಳನ್ನು ಕಲೆಹಾಕಲು ಅಂಕಿ-ಅಂಶ ಜಾಗೃತಿ ತಂಡಗಳನ್ನು ಕೂಡ ಮಾಡಲಾಗಿದೆ. ಅಲ್ಲದೆ ಒಟ್ಟು 23 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗುತ್ತಿದ್ದು, ಅಲ್ಲಿ ವಿಡಿಯೋ ಚಿತ್ರೀಕರಣ ತಂಡವೂ ಇರಲಿದೆ ಎಂದು ತಿಳಿಸಿದರು. 50 ಸಾವಿರ ರೂಪಾಯಿ ಮೇಲ್ಪಟ್ಟು ನಗದು ಕಂಡುಬಂದರೆ, ಅದಕ್ಕೆ ಸೂಕ್ತ ದಾಖಲೆಗಳನ್ನು ತೋರಿಸಬೇಕು. ದಾಖಲೆ ತೋರಿಸುವವರೆಗೂ ಅದನ್ನು ಸಂಬಂಧಿಸಿದ ವಿಭಾಗದಲ್ಲಿ ಇರಿಸಲಾಗುತ್ತದೆ ಎಂದರು.


[ays_poll id=3]