This is the title of the web page
This is the title of the web page
Education NewsLocal News

10 ತಿಂಗಳ ತೋಟಗಾರಿಕೆ ಇಲಾಖೆಯಿಂದ ತರಬೇತಿಗೆ ಅರ್ಜಿ ಆಹ್ವಾನ..


K2kannadanews.in

horticulture department ರಾಯಚೂರು : ತೋಟಗಾರಿಕ ಇಲಾಖೆಯಿಂದ 2024-25ನೇ ಸಾಲಿಗೆ ತೋಟಗಾರಿಕ ತರಬೇತಿಗಾಗಿ (training) ರಾಯಚೂರು (Raichur) ಜಿಲ್ಲೆಯ ಆಸಕ್ತಿಯುಳ್ಳ ಅರ್ಹ ರೈತ (Farmers) ಮಕ್ಕಳಿಗೆ 10 ತಿಂಗಳ (Months) ತರಬೇತಿ ನಡೆಯಲಿದ್ದು ಆಸಕ್ತರು ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಅಥಾವ ಇಲಾಖೇಯ ವೆಬ್ಸೈಟ್ https://horticulturedir.karnataka.gov.in ಮೂಲಕ ಅರ್ಜಿ ಪಡೆಯಬಹುದು.

ಕೊಪ್ಪಳ (Koppal) ತಾಲೂಕಿನ ಮುನಿರಾಬಾದ (Munirabad) ತೋಟಗಾರಿಕ ತರಬೇತಿ ಕೇಂದ್ರದಲ್ಲಿ ಈ ಒಂದು ತರಬೇತಿ ನಡೆಯಲಿದೆ. ಸಾಮಾನ್ಯ ಅಭ್ಯರ್ತಿ-16 ( ಮಹಿಳೆ-8), ಪರಿಶಿಷ್ಟ ಜಾತಿ (SC)-3 ಪರಿಶಿಷ್ಟ ಪಂಗಡ (ST)-1 ಗಳಂತೆ ಒಟ್ಟು 20 ಅಭ್ಯರ್ತಿಗಳನ್ನು ನಿಗದಿಪಡಿಸಲಾಗಿದ್ದು. ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡದವರಿಗೆ ಕನಿಷ್ಠ 18 ವರ್ಷ ಗರಿಷ್ಟ 33 ವರ್ಷ , ಇತರರಿಗೆ ಕನಿಷ್ಠ 18 ವರ್ಷ ಗರಿಷ್ಠ 30ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದ್ದು.

ಅಭ್ಯರ್ಥಿಗಳು ಕನ್ನಡ (Kannada) ವಿಷಯದೊಂದಿಗೆ ಎಸ್.ಎಸ್.ಎಲ್.ಸಿ (Sslc) ಪರಿಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ಪೋಷಕರು (Parents) ಕಡ್ಡಾಯವಾಗಿ ಜಮೀನು (Land)  ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕಾಗಿರುತ್ತದೆ. ಅರ್ಜಿ ಸಲ್ಲಿಸಿ ಅಗತ್ಯ ದಾಖಲೆಗಳೊಂದಿಗೆ ಕಛೇರಿಗೆ ಸಲ್ಲಿಸಲು ಏ.1 ಕೊನೆಯ (April 1 last date)  ದಿನಾಂಕವಾಗಿರುತ್ತದೆ.


[ays_poll id=3]