
ರಾಯಚೂರು : ರಾಯಚೂರಿನಲ್ಲಿ ಪೂರ್ಣ ಪ್ರಮಾಣದ ಲಸಿಕೆ ಕಾರ್ಯ ಆಗಿಲ್ಲ ಎಂದು ರಾಜ್ಯಮಟ್ಟದ ಪರಿಣಾಮಕಾರಿ ಮಿಷನ್ ಇಂದ್ರಧನುಷ 5.0 ಕಾರ್ಯಕ್ರಮವನ್ನು ರಾಯಚೂರಿನಲ್ಲಿ ಉದ್ಘಾಟಿಸಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ರಾಯಚೂರಿನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡುತ್ತಾ, ಲಸಿಕೆ ಕಾರ್ಯಕ್ರಮ ಸಂಪೂರ್ಣವಾಗಿ ಅನುಷ್ಠಾನವಾಗಬೇಕು. 12 ಲಸಿಕೆಗಳನ್ನ ರಾಜ್ಯದಲ್ಲಿ ಮಕ್ಕಳಿಗೆ ನೀಡುತ್ತಿದ್ದೇವೆ. ಲಸಿಕೆಗಳನ್ನ 97% ರಷ್ಟು ರಾಜ್ಯದಲ್ಲಿ ನೀಡಿದ್ದೇವೆ, ರಾಯಚೂರಿನಲ್ಲಿ 92% ರಷ್ಟು ಮಾತ್ರ ಆಗಿದೆ. ರಾಯಚೂರಿನಲ್ಲಿ ಪೂರ್ಣ ಪ್ರಮಾಣದ ಲಸಿಕೆ ಕಾರ್ಯ ಆಗಿಲ್ಲ ಇಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಕೆಲವು ಜಿಲ್ಲೆಗಳು ಲಸಿಕೆ ಹಾಕುವಲ್ಲಿ ಹಿಂದೆ ಬಿದ್ದಿದ್ದು ದಡಾರ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಒಟ್ಟು 1 ಲಕ್ಷ 63 ಸಾವಿರ ಜನ ಲಸಿಕೆ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ. ಎಂಆರ್ 1, ಎಂಆರ್ 2 ಲಸಿಕೆ ಸಂಪೂರ್ಣವಾಗಿ ನೀಡುವಲ್ಲಿ ಹಿಂದೆ ಬಿದ್ದಿದ್ದೇವೆ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಲಸಿಕೆ ಗಳನ್ನ ಮೂರು ಹಂತದಲ್ಲಿ ನೀಡುತ್ತಿದ್ದೇವೆ. ಹೀಗಾಗಿ ಅಭಿಯಾನ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಜಿಲ್ಲೆಗೆ ಈ ವರ್ಷ ಮೂರು ಸಮುದಾಯ ಆರೋಗ್ಯ ಕೇಂದ್ರ ನೀಡುತ್ತಿದ್ದೇವೆ. ವೈದ್ಯರ ಕೊರತೆ ನೀಗಿಸಲು ಔಟ್ ಸೋರ್ಸ್ ಮೂಲಕ ತೆಗೆದುಕೊಳ್ಳಲು ಸೂಚಿಸಿದ್ದೇನೆ. ವೈದ್ಯರ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ. ನಾಲ್ಕು ಜಿಲ್ಲೆಯಲ್ಲಿ ಆಶಾಕಿರಣ ಕಾರ್ಯಕ್ರಮ ಕಾರ್ಯಕ್ರಮ ಚಾಲನೆಗೆ ಬಂದಿದೆ. ಉಚಿತ ಕಣ್ಣಿನ ಪರೀಕ್ಷೆ ,ಚಿಕಿತ್ಸೆ ನೀಡಿ ಕನ್ನಡಕ ನೀಡುವ ಕಾರ್ಯಕ್ರಮವನ್ನು ರಾಯಚೂರು ಸೇರಿ ಹೆಚ್ಚುವರಿ 4 ಜಿಲ್ಲೆಗಳನ್ನು ಸೇರಿಸುತ್ತಿದ್ದೇವೆ ಎಂದು ಹೇಳಿದರು.
![]() |
![]() |
![]() |
![]() |
![]() |
[ays_poll id=3]