
K2 ಪೊಲಿಟಿಕಲ್ ನ್ಯೂಸ್ : ರಾಯಚೂರು ಜಿಲ್ಲೆ ಸೇರಿ ರಾಜ್ಯದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯರ ಸಂಖ್ಯೆ, ಕ್ಷೇತ್ರಗಳ ಗಡಿ ನಿರ್ಣಯ ಕುರಿತಾಗಿ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ಸೆ.19ರೊಳಗೆ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಸೆ. 25 ರಿಂದ ಅದಾಲತ್ ಮೂಲಕ ಪರಿಶೀಲಿಸಲಾಗುವುದು.
ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಗಡಿ ನಿರ್ಣಯ ಬಗ್ಗೆ ಸೆಪ್ಟೆಂಬರ್ 25 ರಿಂದ ಅದಾಲತ್ ನಡೆಯಲಿದ್ದು, 10 ದಿನವಾದ ಆಕ್ಷೇಪಣೆಗಳ ಪರಿಶೀಲನೆ ನಡೆಸಲಾಗುವುದು. ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಇಲಾಖೆ ಕಚೇರಿಯಲ್ಲಿ ಅದಾಲತ್ ನಡೆಯಲಿದೆ. ಸೆ. 25 ರಿಂದ ಅ. 5ರವರೆಗೆ ಜಿಲ್ಲಾವಾರು ಸಲ್ಲಿಕೆಯಾದ ಆಕ್ಷೇಪಣೆಗಳ ಪರಿಶೀಲನೆ ನಡೆಸಲಾಗುವುದು.
*ಸೆಪ್ಟೆಂಬರ್ 25 ರಂದು ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಗದಗ ಜಿಲ್ಲೆ
*ಸೆಪ್ಟೆಂಬರ್ 26ರಂದು ಹಾಸನ, ವಿಜಯನಗರ, ಹಾವೇರಿ, ಕೋಲಾರ
*ಸೆಪ್ಟಂಬರ್ 27ರಂದು ಕಲಬುರಗಿ, ಮೈಸೂರು, ಯಾದಗಿರಿ, ವಿಜಯಪುರ
*ಸೆಪ್ಟಂಬರ್ 29ರಂದು ಬೆಂಗಳೂರು ನಗರ, ಉತ್ತರ ಕನ್ನಡ, ಧಾರವಾಡ, ಕೊಪ್ಪಳ
*ಸೆಪ್ಟೆಂಬರ್ 30ರಂದು ರಾಮನಗರ, ಬಳ್ಳಾರಿ, ಬೀದರ್, ಚಿಕ್ಕಮಗಳೂರು
*ಅಕ್ಟೋಬರ್ 3ರಂದು ಚಿಕ್ಕಬಳ್ಳಾಪುರ, ಮಂಡ್ಯ, ಬೆಳಗಾವಿ, ತುಮಕೂರು,
*ಅಕ್ಟೋಬರ್ 4ರಂದು ದಕ್ಷಿಣ ಕನ್ನಡ, ದಾವಣಗೆರೆ, ರಾಯಚೂರು, ಚಿತ್ರದುರ್ಗ
*ಅಕ್ಟೋಬರ್ 5ರಂದು ಕೊಡಗು, ಚಾಮರಾಜನಗರ, ಶಿವಮೊಗ್ಗ ಮತ್ತು ಉಳಿದ ಪ್ರಕರಗಳ ಪರಿಶೀಲನೆ ನಡೆಸಲಾಗುವುದು.
![]() |
![]() |
![]() |
![]() |
![]() |
[ays_poll id=3]