This is the title of the web page
This is the title of the web page
Feature ArticleVideo News

ಪೋಷಕರೆ ಎಚ್ಚರ ಡಿಜಿಟಲ್‌ ವ್ಯಸನಿಯಾಗುತ್ತಿದ್ದಾರೆ ನಿಮ್ಮ ಮಕ್ಕಳು..?


K2kannadanews.in

digital addicts : ಒತ್ತಡದ ಜೀವನದ (stressful life) ಮಧ್ಯೆ ನಮ್ಮ ಮಕ್ಕಳ ಕಾಳಜಿಯನ್ನು (Caring for children) ಮರೆತಿದ್ದೇವೆ. ನಮಗೆ ಗೊತ್ತಿಲ್ಲದೆ ಮಕ್ಕಳನ್ನು ಡಿಜಿಟಲ್ ವ್ಯಸನಿಗಳನ್ನಾಗಿ (digital addicts) ಮಾಡುತಿದ್ದೇವೆ. ಇತ್ತೀಚೆಗೆ ನಡೆಸಿದ ಸಮೀಕ್ಷೆಯ (Survey) ಪ್ರಕಾರ 5 ರಿಂದ 16 ವರ್ಷ ವಯಸ್ಸಿನ ಸುಮಾರು 60 ಪ್ರತಿಶತದಷ್ಟು ಮಕ್ಕಳು ಡಿಜಿಟಲ್ ವ್ಯಸನದ ಬಲಿಪಶುಗಳಾಗುವ ಎಲ್ಲಾ ಸಾಧ್ಯತೆಗಳಿವೆ ಎಂಬುದು 1000 ಪೋಷಕರು (parents) ವರದಿ ಮಾಡಿದ ಮಕ್ಕಳ ವರ್ತನೆಯಿಂದ ಅಂದಾಜಿಸಲಾಗಿದೆ.

ಪೋಷಕರು ತಮ್ಮ ಕೆಲಸಗಳಿಗೆ ಮಕ್ಕಳು ಅಡ್ಡಿಪಡಿಸಬಾರದು ಎಂಬ ನಿಟ್ಟಿನಲ್ಲಿ ಮಕ್ಕಳ ಕೈಗೆ ಮೊಬೈಲ್ (Mobile) ಕೊಡಲಾಗುತ್ತಿದೆ. ಇದರಿಂದ ಮಕ್ಕಳು ಕಳಪೆ ನಿದ್ರೆಯ (poor sleep) ಗುಣಮಟ್ಟ, ಕಡಿಮೆ ದೈಹಿಕ ಚಟುವಟಿಕೆ (Physical activityl), ಕಡಿಮೆ ಸಾಮಾಜಿಕ (Social) ಮತ್ತು ಶೈಕ್ಷಣಿಕ ಕಾರ್ಯಕ್ಷಮತೆ (Academic performance) ಸೇರಿದಂತೆ ವಿವಿಧ ಅಪಾಯಗಳನ್ನು (Danger’s) ಮೊಬೈಲ್‌ನಂತಹ ಡಿಜಿಟಲ್‌ ಮಾಧ್ಯಮಗಳ ಸ್ಕ್ರೀನ್‌ ಸೃಷ್ಟಿಸುತ್ತಿದೆ (Creating Mobile). ಈ ಸಮಸ್ಯೆಯನ್ನು ಹೈಲೈಟ್ ಮಾಡುವುದು ಸಮೀಕ್ಷೆಯ ಗುರಿಯಾಗಿದೆ.

ಒಂದು ದಿನದಲ್ಲಿ ಎಷ್ಟು ಸಮಯ ಮೊಬೈಲ್ ಬಳಸಬೇಕು ಅಂತ ಪ್ರಶ್ನೆ ಬಂದಾಗ ಆರೋಗ್ಯ ತಜ್ಞರು ದಿನಕ್ಕೆ 2-3 ಗಂಟೆಗಳ ಕಾಲ ಮಾತ್ರ ಮೊಬೈಲ್ ಬಳಸಲು ಶಿಫಾರಸು ಮಾಡುತ್ತಾರೆ. ಕಾರಣ ಸ್ಕ್ರೀನ್‌ ಸಣ್ಣದಿರುವುದರಿಂದ ಇದು ಕಣ್ಣುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಸಮಯದ ಮಿತಿ ವಯಸ್ಕರಿಗೆ. ಚಿಕ್ಕ ಮಕ್ಕಳು ಮೊಬೈಲ್‌ ಬಳಸದೇ ಇರುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಹೆಚ್ಚು ಮೊಬೈಲ್ ಬಳಸುವ ಚಟವು ಉದ್ವೇಗ ನಿಯಂತ್ರಣ ಅಸ್ವಸ್ಥತೆಯಾಗಿದೆ. ಇದನ್ನು ಇಂಟರ್ನೆಟ್ ಅಡಿಕ್ಷನ್ ಡಿಸಾರ್ಡರ್ ಎಂದೂ ಕರೆಯುತ್ತಾರೆ. ಇದರಲ್ಲಿ ಡಿಜಿಟಲ್ ಸಾಧನಗಳು, ಡಿಜಿಟಲ್ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮದಂತಹ ವೇದಿಕೆಗಳನ್ನು ಬಳಸುವ ಅಗತ್ಯವನ್ನು ಅನುಭವಿಸಲಾಗುತ್ತದೆ.

ಮಗು ಡಿಜಿಟಲ್‌ ವ್ಯಸನಿಯಾಗಿದೆ ಅಥವಾ ಆಗುತ್ತಿದೆ ಎಂದು ಗುರುತಿಸುವುದು ಹೇಗೆ..?

* ಇಡೀ ದಿನ ಫೋನ್‌ನಲ್ಲಿ ಇರುವುದು.
* ಮೊಬೈಲ್‌ ಕೊಡದಿದ್ದರೆ ಕೋಪ ಅಥವಾ ಅಸಮಾಧಾನ ವ್ಯಕ್ತಪಡಿಸುವುದು.
* ಇತರ ಮಕ್ಕಳೊಂದಿಗೆ ಹೊರಗೆ ಆಟವಾಡಲು ಅನಾಸಕ್ತಿ.
* ಗುಟ್ಟಾಗಿ ಫೋನ್ ಬಳಸುವುದು
ಫೋನ್ ಬಳಸಲು ನೆಪ ಹೇಳುವುದು.
* ಫೋನ್ ಅಥವಾ ಟಿವಿ ನೋಡುತ್ತ ಊಟ ಮಾಡುವುದು.

ಇಂತಹ ಸಂಗತಿಗಳು ನಿಮ್ಮ ಮಗುವನಬಳಿ ಕಂಡಾಗ ಅರ್ಥ ಮಾಡಿಕೊಳ್ಳಿ ನಿಮ್ಮ ಮಗು ಡಿಜಿಟಲ್‌ ವ್ಯಸನಿಯಾಗುತ್ತಿದೆ ಎಂದು.

ಮೊಬೈಲ್ ಚಟಬಿಡಿಸುವುದು ಹೇಗೆ..?

ಪೋಷಕರು ಮಕ್ಕಳ ಮೇಲಿನ ಅತಿಯಾದ ಪ್ರೀತಿಯಿಂದ ಮೊಬೈಲ್ ಕೊಡುವುದು, ನಿಮ್ಮ ಕೆಲಸಕ್ಕೆ ಅಡ್ಡಿಯಾಗದಿರಲಿ ಎಂದು ಮೊಬೈಲ್ ಕೊಟ್ಟು ಕೂರಿಸುವುದು ಬಿಡಿ. ಮಕ್ಕಳನ್ನು ಮೊಬೈಲ್ ಫೋನ್‌ಗಳಿಂದ ದೂರವಿರಿಸಲು ಹೊರಾಂಗಣ ಆಟಗಳು ಮತ್ತು ಚಟುವಟಿಕೆಗಳಲ್ಲಿ ಬ್ಯುಸಿಯಾಗಿಡಬೇಕು. ಮಗುವಿನ ಮುಂದೆ ಪೋಷಕರು ಕೂಡ ಹೆಚ್ಚು ಮೊಬೈಲ್ ಬಳಸಬಾರದು. ಮನೆಯಲ್ಲಿ ಮಗುವಿಗೆ ಹೊಸ ಮತ್ತು ಸೃಜನಶೀಲ ಕೌಶಲ್ಯಗಳನ್ನು ಕಲಿಸಿ. ಇದರಿಂದ ಮಕ್ಕಳನ್ನು ಡಿಜಿಟಲ್ ವ್ಯಸನಿಯಾಗದಂತೆ ತಡೆಯಬಹುದು.


[ays_poll id=3]