This is the title of the web page
This is the title of the web page
Crime News

ಹಳೆ ದ್ವೇಶ : ಕಟಿಂಗ್‌ ಶಾಪ್‌ನೊಳಗೆ ಕೊಚ್ಚಿ ಹಾಕಿದರು!


K2 ಕ್ರೈ ನ್ಯೂಸ್ : ಹಳೆ ದ್ವೇಷದ ಹಿನೆನಲೆ ಯುವಕನೊಬ್ಬನನ್ನು ಅಟ್ಟಾಡಿಸಿಕೊಂಡು ಬಂದ ಹಂತಕರು ಕಟ್ಟಿಂಗ್ ಶಾಪ್‌ನೊಳಗೆ ಆತನನ್ನು ಕೊಚ್ಚಿ ಕೊಲೆಗೈದ ಘಟನೆ ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಮದನ್ ಬಾಣಸವಾಡಿ ಮುಖ್ಯರಸ್ತೆಯಲ್ಲಿ ಇರುವ ವಿಚಾರ ತಿಳಿದು ಮಾರಕಾಸ್ತ್ರಗಳೊಂದಿಗೆ ಬಂದ ಹಂತಕರು ಮದನ್‌ನನ್ನು ಮುಖ್ಯ ರಸ್ತೆಯಲ್ಲಿ ತಡೆದು ಅಟ್ಯಾಕ್‌ ನಡೆಸಿದ್ದಾರೆ. ಹಂತಕರ ಕೈಯಿಂದ ತಪ್ಪಿಸಿಕೊಂಡು ಮದನ್ ಓಡಲು ಯತ್ನಿಸಿದ ವೇಳೆ ಕಿಲೋಮೀಟರ್‌ಗಳಷ್ಟು ದೂರ ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಈ ಆರೋಪಿಗಳಿಂದ ತಪ್ಪಿಸಿಕೊಂದ ಮದನ್ ಒಂದು ಕಟ್ಟಿಂಗ್ ಶಾಪ್‌ ಒಳನುಗ್ಗಿದ್ದಾನೆ.

ಕೂಡಲೇ ಹಿಂಬದಿಯಿಂದ ಬಂದ ಆರೋಪಿಗಳು ಅಂಗಡಿ ಬಾಗಿಲು ಮುಚ್ಚಿ ಮನಸ್ಸೋ ಇಚ್ಚೆ ಮದನನನ್ನು ಕೊಚ್ಚಿಹಾಕಿದ್ದಾರೆ. ಹಲ್ಲೆಯಿಂದ ತೀವ್ರ ರಕ್ತಸ್ರಾವಕ್ಕೆ ಒಳಗಾದ ಮದನ್ (32)ಪ್ರಾಣ ಬಿಟ್ಟಿದ್ದಾನೆ. ಸ್ಥಳಕ್ಕೆ ‌ಬಂದ ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.


[ays_poll id=3]