![]() |
![]() |
![]() |
![]() |
![]() |
ರಾಯಚೂರು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ತಾಲೂಕಿನ ಯದ್ಲಾಪುರ ಗ್ರಾಮದಲ್ಲಿ ಮೊರಂ ಕ್ವಾರಿ ಕೊರೆಯಲಾಗಿತ್ತು. ಬೇಸಿಗೆ ಹಿನ್ನೆಲೆ ಹೊಂಡದಲ್ಲಿ ಸ್ನಾನ ಮಾಡಲು ಹೋದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿಠ್ಠಲ್ (22) ಹೊಂಡದಲ್ಲಿ ಈಜುಬಾರದೆ ಮೃತಪಟ್ಟ ಯುವಕ.
ಭಾರತ್ ಮಾಲಾ ಯೋಜನೆಯಡಿ ರಾಷ್ಟ್ರೀಯ ಆರು ಪಥದ ಹೆದ್ದಾರಿ ನಿರ್ಮಾಣಕ್ಕೆ ಮೊರಂಗಾಗಿ ತೋಡಿದ್ದ ಜಾಗದಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದ್ದು, ಸುಮಾರು 20 ಅಡಿ ಆಳವಿದ್ದು ಯುವಕ ಹೊಂಡದಲ್ಲಿ ಸಾವನ್ನಪ್ಪಿದ್ದಾನೆ.ಅವೈಜ್ಞಾನಿಕವಾಗಿ ಕ್ವಾರಿ ತೋಡಿ ತಡೆಗೋಡೆ ನಿರ್ಮಿಸದೆ ಬಿಟ್ಟಿದ್ದಕ್ಕೆ ಅವಘಡ ನಡೆದಿದೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಯುವಕ ಸಾವನ್ನಪ್ಪಿದ್ದು, ಮೃತನ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
![]() |
![]() |
![]() |
![]() |
![]() |
[ays_poll id=3]