This is the title of the web page
This is the title of the web page
National News

XBB 1.5 ಸ್ಫೋಟನಿಂದ ಭಾರತಕ್ಕೆ ಹೆಚ್ಚಿದ ಅಪಾಯ! 25 ದೇಶಗಳಿಗೆ ಹಬ್ಬಿದ XBB.1.5: WHO ಒಮಿಕ್ರಾನ್


K2 ನ್ಯೂಸ್ ಡೆಸ್ಕ್ : XBB 1.5 ರೂಪಾಂತರಿ ಬಗ್ಗೆ ಪ್ರಪಂಚವೇ ಸಾಕಷ್ಟು ತಲ್ಲಣಗೊಂಡಿದೆ, ಇದಾಗಲೇ ಚೀನಾ ಅಮೆರಿಕ ಸೇರಿದಂತೆ 25 ದೇಶಗಳಿಗೆ ಹಬ್ಬಿದ್ದು ಸಾಕಷ್ಟು ಸಮಸ್ಯೆಗಳು ಉಂಟು ಮಾಡಿ, ಅತಿ ವೇಗವಾಗಿ ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಈ ರೂಪಾಂತರ ವೈರಸ್.

ಅಮೆರಿಕಾದಲ್ಲಿ ಶೇ.40ರಷ್ಟು ಕೊರೊನಾ ಸೋಂಕು ಹರಡಿ ಆತಂಕ ಸೃಷ್ಟಿಸಿರುವ XBB 1.5 ರೂಪಾಂತರಿ ಭಾರತಕ್ಕೂ ಕಾಲಿಟ್ಟಿದೆ. ಆದರೆ, ನಮ್ಮಲ್ಲಿಯೂ ಈ ಅಪಾಯಕಾರಿ XBB 1.5 ವೈರಸ್ ಸೋಂಕಿತರ ಸಂಖ್ಯೆ ದಿಢೀರನೇ 14ಕ್ಕೆ ಏರಿದೆ. XBB ರೂಪಾಂತರಿಗೆ ಹೋಲಿಸಿದರೆ ಇದು ಹೆಚ್ಚು ಡೇಂಜರ್ ಎಂದು ವೈರಾಣು ತಜ್ಞರು ಎಚ್ಚರಿಸಿರುವ ಕಾರಣಕ್ಕೆ ಮುಂಜಾಗ್ರತೆ ವಹಿಸುವುದು ಬಹಳ ಮುಖ್ಯ. ಚಳಿ ವಾತಾವರಣದಲ್ಲಿ XBB 1.5 ಬಹಳ ವೇಗ ಹರಡುವ ಗುಣಲಕ್ಷಣದ ಜತೆಗೆ ದೇಹದ ರೋಗ ನಿರೋಧಕ ಶಕ್ತಿ ಮೇಲೆಯೇ ನೇರ ದಾಳಿ ಮಾಡುತ್ತವೆ.

ಉಪ-ವೇರಿಯಂಟ್ XBB.1.5 ಪ್ರಕರಣಗಳು ಸ್ಥಿರವಾಗಿ ಹೆಚ್ಚುತ್ತಿವೆ ಎಂದು WHO ಮುಖ್ಯಸ್ಥ ಟೆಟ್ರೊಸ್ ಎಚ್ಚರಿಸಿದ್ದಾರೆ. ಇದು 25ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ಇದರ ಗಂಭೀರತೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದ್ದು, ಸಂಪೂರ್ಣ ವಿವರಗಳನ್ನು ಶೀಘ್ರ ಬಹಿರಂಗಪಡಿಸಲಾಗುವುದು ಎಂದಿದ್ದಾರೆ. ಅಮೆರಿಕದಲ್ಲಿ ಈ ರೂಪಾಂತರದಿಂದ ಡಿಸೆಂಬರ್‌ನಲ್ಲಿ ಪ್ರಕರಣಗಳು ಹೆಚ್ಚಾಗಿವೆ. ಏತನ್ಮಧ್ಯೆ, ಭಾರತದಲ್ಲಿ 24 ಗಂಟೆಗಳಲ್ಲಿ 214 ಪ್ರಕರಣಗಳು ವರದಿಯಾಗಿವೆ. ಧನಾತ್ಮಕ ದರವು 0.01 ಆಗಿದೆ.


[ays_poll id=3]