This is the title of the web page
This is the title of the web page
Crime NewsState News

ಮದುವೆ ಆದಾಗಿನಿಂದ ಹತ್ತಿರ ಸೇರಿಸದ ಪತ್ನಿ : ವೈದ್ಯರ ಮಾತುಕೇಳಿ ಮದುವೆ ರದ್ದು ಮಾಡಿದ ಪತಿ..!


K2kannadanews.in

Transgender marriage : ವ್ಯಕ್ತಿಯೊಬ್ಬ (Man) 2014ರ ಜುಲೈನಲ್ಲಿ ಮದುವೆಯಾಗಿದ್ದ (Marred). ಅಂದಿನಿಂದ ಪ್ರತಿದಿನ ಪತ್ನಿಯ (wife) ಜತೆಗೆ ಲೈಂಗಿಕ ಕ್ರಿಯೆಗೆ ಹವಣಿಸುತ್ತಿದ್ದ. ಆದರೆ, ಪತ್ನಿ ಮಾತ್ರ ಪ್ರತಿ ಬಾರಿ ಒಂದಲ್ಲ ಒಂದು ಕಾರಣ ಹೇಳಿ ರತಿಕ್ರೀಡೆಯಿಂದ ತಪ್ಪಿಸಿಕೊಳ್ಳುತ್ತಿದ್ದಳು (Escaped). ಇಂದಲ್ಲ ನಾಳೆ ಸರಿಹೋಗುತ್ತಾಳೆ ಎಂದಿದ್ದವನ ಬಾಳಲ್ಲಿ ಬಿರುಗಾಳಿ ಎಬ್ಬಿಸಿತ್ತು ವೈದ್ಯರ ಮಾತು. ಏನದು ಅಂತೀರಾ ಮುಂದೆ ಓದಿ..?

ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಘಟನೆ ನಡೆಸಿದ್ದು‌. ಇಂದಲ್ಲ ನಾಳೆ ಸರಿ ಹೋಗುತ್ತಾಳೆ ಎಂಬ ಭರವಸೆ ಕಳೆಗುಂದಿದಾಗ ಅನುಮಾನಗೊಂಡ (Drought) ಪತಿ, ಕೊನೆಯ ಆಯ್ಕೆ ಎಂಬಂತೆ ವೈದ್ಯರ ಸಮಾಲೋಚನೆ ಮಾಡುತ್ತಾರೆ. ಹೇಗೋ ಮಾಡಿ ವೈದ್ಯರ (Doctor) ಬಳಿ ತನ್ನ ಪತ್ನಿಯನ್ನು ಕರೆದುಕೊಂಡು ಹೋಗುತ್ತಾನೆ. ಪರೀಕ್ಷೆ (Test) ಮಾಡಿದ ಬಳಿಕ ವೈದ್ಯರು, ನೀವು ಮದುವೆಯಾಗಿರುವುದು ಮಹಿಳೆಯನ್ನಲ್ಲ ಓರ್ವ ತೃತೀಯ (transgender) ಲಿಂಗಿಯನ್ನು ಎಂದು ಹೇಳಿದ್ದನ್ನು ಕೇಳಿ ಪತಿರಾಯ (Hasbend) ಒಂದು ಕ್ಷಣ ಶಾಕ್​ (Shock) ಆಗುತ್ತಾನೆ. ಜೀವನದಲ್ಲಿ ಎಂಥಾ ಮಿಸ್ಟೇಕ್​ ಆಯ್ತು ಎಂದು ಬಹಳ ಚಿಂತೆ ಮಾಡುವ ಸಂತ್ರಸ್ತ ಪತಿ ಕೊನೆ ಒಂದು ನಿರ್ಧಾರಕ್ಕೆ ಬರುತ್ತಾನೆ.

ಮದುವೆಯಾದ ಒಂದೇ ವರ್ಷಕ್ಕೆ ಡಿವೋರ್ಸ್​ ಪಡೆಯಲು ನಿರ್ಧಾರ ಮಾಡುತ್ತಾನೆ. ಆದರೆ, ಅತ್ತೆಯ ಮನೆಯವರು ಪರಿಹಾರ ಹಣಕ್ಕೆ ಬೇಡಿಕೆ ಇಟ್ಟಾಗ, ಮತ್ತೊಮ್ಮೆ ಯೋಚಿಸಿ, ವಕೀಲರ ಜತೆ ಚರ್ಚಿಸಿ, ಮದುವೆಯನ್ನೇ ರದ್ದುಮಾಡಲು ನಿರ್ಧರಿಸುತ್ತಾರೆ. ಸಂತ್ರಸ್ತ ಪತಿ ವಿಚ್ಛೇದನ ಪ್ರಕರಣವನ್ನು ಹಿಂತೆಗೆದುಕೊಂಡು, ಮದುವೆಯನ್ನು ರದ್ದುಗೊಳಿಸುವಂತೆ 2016ರಲ್ಲಿ ಅರ್ಜಿ ಸಲ್ಲಿಸುತ್ತಾರೆ. ಗುರುತನ್ನು ಮರೆಮಾಚಿ ವಿವಾಹವಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ವಿವಾಹವನ್ನು ರದ್ದುಗೊಳಿಸುವಂತೆ ಇದೀಗ ನ್ಯಾಯಾಲಯ ಆದೇಶಿಸಿದೆ.


[ays_poll id=3]