This is the title of the web page
This is the title of the web page
Crime NewsNational News

ತಂಗಿಯ ಕೊಂದ ಅಣ್ಣ, ತಾಯಿಯು ಸಾಥ್ ನೀಡಿದ್ದಾದ್ರು ಯಾಕೆ..?


K2kannadanews.in

Brother kill sister : ಮನೆಯಲ್ಲಿ (Home) ಯಾರು ಇಲ್ಲದ ಸಮಯದಲ್ಲಿ ಪ್ರಿಯಕರನನ್ನು (Lover) ಮನೆಗೆ ಕರೆಸಿದ್ದ 15 ವರ್ಷದ ತಂಗಿ (Sister) ಅಣ್ಣನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಮುಂದೆ ನಡೆದಿದ್ದೇ ಘನ ಗೋರ ಘಟನೆ.

ಹೌದು ಘಟನೆ ನಡೆದಿದ್ದು ಮಧ್ಯಪ್ರದೇಶದಲ್ಲಿ, (Madhya Pradesh) 25 ವರ್ಷದ ಯುವಕನೊಬ್ಬ ತನ್ನ 15 ವರ್ಷದ ತಂಗಿಯು ಬಾಯ್‌ಫ್ರೆಂಡ್‌ ಜತೆ ಸರಸವಾಡುತ್ತಿದ್ದನ್ನು ಕಂಡವನೇ ಆಕೆಯ ಕತ್ತು ಹಿಸುಕಿ (Man Strangles Sister) ಕೊಲೆ ಮಾಡಿದ್ದಾನೆ. ಜನವರಿ 31ರಂದು ಮಧ್ಯಪ್ರದೇಶದ ಪನ್ನಾ ಜಿಲ್ಲೆ ಗ್ರಾಮವೊಂದರಲ್ಲಿ ಬಾಲಕಿಯ ತಂದೆ, ತಾಯಿ ಹಾಗೂ ಸಹೋದರನು ಸಮಾರಂಭ ಒಂದಕ್ಕೆ ಹೋಗಿದ್ದರು. ಇದೇ ವೇಳೆ (Time) ಬಾಲಕಿಯು ತನ್ನ 16 ವರ್ಷದ ಬಾಯ್‌ಫ್ರೆಂಡ್‌ನನ್ನು ಮನೆಗೆ ಕರೆಸಿದ್ದಾರೆ. ಅವರಿಬ್ಬರು ಸರಸ ಸಲ್ಲಾಪದಲ್ಲಿ (tribute) ತೊಡಗಿರುವಾಗಲೇ ಬಾಲಕಿಯ ಸಹೋದರನು ಮನೆಗೆ ಆಗಮಿಸಿದ್ದಾನೆ. ಇಬ್ಬರೂ ಸರಸವಾಡುತ್ತಿದ್ದನ್ನು ಕಂಡ ಆತನು ಆಕೆಯ ಬಾಯ್‌ಫ್ರೆಂಡ್‌ನನ್ನು ಹಿಡಿಯಲು (Try to catch) ಯತ್ನಿಸಿದ್ದಾನೆ. ಆದರೆ, 16 ವರ್ಷದ ಬಾಲಕ ಅಲ್ಲಿಂದ ಪರಾರಿಯಾಗಿದ್ದಾನೆ (Escape).


ಬಾಲಕನ ಜತೆ ಇದ್ದ ತಂಗಿಯ ಮೇಲೆ ಕೋಪಗೊಂಡ (Angry) ಆತನು ಆಕೆಯ ಕತ್ತು (neck) ಹಿಸುಕಿ ಕೊಲೆ ಮಾಡಿದ್ದಾನೆ. ಸಮಾರಂಭ (Program) ಮುಗಿಸಿಕೊಂಡು ತಾಯಿ (Mother) ಮನೆಗೆ ಬಂದ ಬಳಿಕ ನಡೆದ ವಿಷಯ ತಿಳಿಸಿದ್ದಾನೆ. ತಾಯಿ ಹಾಗೂ ಮಗ ಸೇರಿ ಬಾಲಕಿಯ ಶವವನ್ನು ಬಚ್ಚಿಟ್ಟಿದ್ದಾರೆ. ಇದಾದ ಬಳಿಕ ಆಕೆ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ ಎಂದು ಕತೆ (Storey) ಕಟ್ಟಿದ್ದಾರೆ. ಆದರೆ, ಪೊಲೀಸರು (Police) ವಿಚಾರಣೆ ನಡೆಸಿದ ಬಳಿಕ, ಬಾಲಕಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯ ಕತ್ತು ಹಿಸುಕಿ ಕೊಲೆ (Murder) ಮಾಡಲಾಗಿದೆ ಎಂಬುದು ಗೊತ್ತಾಗಿದೆ. ನಂತರ, ತಾಯಿ ಹಾಗೂ ಮಗನನ್ನು ಬಂಧಿಸಿದ್ದಾರೆ.


[ays_poll id=3]