This is the title of the web page
This is the title of the web page
Politics NewsVideo News

ನಾವು ಚಾಕು ಚೂರೀಗಳು ಉಳ್ಳಾಗಡ್ಡಿ ಹೆಚ್ಚಲು ಇಟ್ಕೊಂಡಿಲ್ಲ : ಯತ್ನಾಳ್‌


K2 ಪೊಲಿಟಿಕಲ್ ನ್ಯೂಸ್ : ಶಾಂತಿ ಸಂದೇಶ ಕೊಡುವ ಧಾರ್ಮಿಕ ಕಾರ್ಯಕ್ರಮದಲ್ಲಿ ನಮ್ಮಲ್ಲಿ ಚಾಕು, ಚೂರಿ ಇದೆ, ಹಿಂದುಗಳ ರಕ್ತ ಕುಡೀತೇವೆ ಅಂತ ನೀವೇನಾದರೂ ಹೊರಟಿದ್ದರೆ ನೆನಪಿಟ್ಟುಕೊಳ್ಳಿ, ನಾವೇನು ಚಾಕು ಚೂರಿನಾ ಬರೀ ಉಳ್ಳಾಗಡ್ಡಿ ಹೆಚ್ಚಲು ಇಟ್ಟುಕೊಂಡಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 11 ಕಡೆ ಗಣೇಶ ಚತುರ್ಥಿ ಕಾರ್ಯಕ್ರಮಕ್ಕೆ ಹೋಗಿದ್ದೇನೆ. ಹಿಂದೂಗಳಿಂದ ಕಲ್ಲೆಸೆತ, ಚಾಕು, ಚೂರಿ ಪ್ರದರ್ಶನ ನಡೆದಿಲ್ಲ. ಪ್ರಚೋದನೆಯ ಘೋಷಣೆ ಕೇಳಿಲ್ಲ. ಆದರೆ, ಶಾಂತಿ ಸಂದೇಶ ಕೊಡುವ ಧಾರ್ಮಿಕ ಕಾರ್ಯಕ್ರಮದಲ್ಲಿ ನಮ್ಮೆಲ್ಲರನ್ನು ನಾಶ ಮಾಡುವುದಾಗಿ, ರಕ್ತ ಕುಡಿಯುವುದಾಗಿ ತಿಳಿಸುದ್ದಾರೆ. ಇದು ಖಂಡನೀಯ ಎಂದರು.

ಒಂದಿಷ್ಟು ಜನರು ಅಟ್ಟಹಾಸದಿಂದ ಮೆರೆಯಬೇಕಿದ್ದರೆ ಈ ಸರಕಾರ ಹಿಂದೂಗಳ ರಕ್ಷಣೆ ಮಾಡುತ್ತಿದೆಯೇ ಎಂದು ಕೇಳಿದರು. ಪ್ರಿಯಾಂಕ್ ಖರ್ಗೆಗೆ ನಾಚಿಕೆ ಆಗಬೇಕು. ಖರ್ಗೆಯವರು ಇದಕ್ಕೆ ಉತ್ತರ ಕೊಡಬೇಕು. ಹಿಂದೂಗಳ, ಸನಾತನದ ಬಗ್ಗೆ ಬಂದರೆ ಇವರು ಅಪ್ಪ- ಮಗ ಕೂಡಿ ಹೇಳಿಕೆ ಕೊಡುತ್ತಾರೆ. ಇತ್ತೀಚೆಗೆ ಕೋಲಾರದಲ್ಲಿ ಕುತ್ತಿಗೆ ಪಟ್ಟಿ ಹಿಡಿದು ಹೊರಹಾಕಿದರೆ ಖರ್ಗೆ ಮಾತನಾಡಿಲ್ಲ. ಇದನ್ನು ತಾಲಿಬಾನಿ ಸರಕಾರ ಎನ್ನದಿರಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.


[ays_poll id=3]