This is the title of the web page
This is the title of the web page
State News

ಮಾಧ್ಯಮದ ಮೂಲಕ ನೀರು ಕೇಳಿದ್ದಕ್ಕೆ ರಾತ್ರಿ ಊಟ, ಉಪಹಾರ ನೀಡದ ವಾರ್ಡನ್..


K2kannadanews.in

ರಾಯಚೂರು : ವಿದ್ಯಾರ್ಥಿಗಳು ತಾವು ತಂಗಿರುವ ವಸತಿ ನಿಲಯದಲ್ಲಿ(women’s hostel) ನೀರಿಗೆ ಹಾಹಾಕಾರ ಉಂಟಾಗಿ(water problem), ನೀರು ಕೊಡಿ ಎಂದು ವಾರ್ಡನ್ (warden) ಮೇಡಂ ಅವರಿಗೆ ಕೇಳಿದರೆ ನಿರ್ಲಕ್ಷ್ಯ(neglect) ತೋರಿದ್ದಾರೆ. ಮಾಧ್ಯಮದವರ(media) ಮೂಲಕ ನೀರು ಕೇಳಿಸಿದ್ದಕ್ಕೆ ರಾತ್ರಿ ಊಟ(dinner), ಉಪಹಾರ(brack fast) ನೀಡದೆ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಹೋಗಲು ಬಿಟ್ಟಿಲ್ಲವಂತೆ ಈ ವಾರ್ಡನ್ ಮೇಡಂ.

ಹೌದು ರಾಯಚೂರು ನಗರದ ಹೊರವಲಯದಲ್ಲಿ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ನೀರಿನ ತಾತ್ಪರ್ಯ ಉಂಟಾಗಿದೆ. ಕಳೆದ ಒಂದು ತಿಂಗಳಿಂದ ನೀರಿನ ಸಮಸ್ಯೆ ಇದೆ. ಉಪ್ಪು ಇಲ್ಲದ ಸಪ್ಪನೆ ಊಟ, ತರಕಾರಿ ಇಲ್ಲದ ಸಾರು, 15 ದಿನಕ್ಕೆ ಒಮ್ಮೆ ಶೌಚಾಲಯ ಕ್ಲೀನ್, ಕಸ ಬಳಿಯೋಕೆ ಒಂದು ಪೊರಕೆ ಇಲ್ಲ, ಸೊಳ್ಳೆ ಬತ್ತಿ ಇಲ್ಲ, ಸೋಪು ಕಿಟ್ ಇಲ್ಲ, ಬಳಸಕ್ಕೆ ನೀರಿಲ್ಲ, ಕುಡಿಯೋಕೆ ನೀರಿಲ್ಲ ಸ್ನಾನ ಮಾಡದೆ ಕಾಲೇಜಿಗೆ ಹೋಗುತ್ತೇವೆ ಅಂತ ವಾರ್ಡನ್ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ. ಮಾಧ್ಯಮದವರು ವಸತಿ ನಿಲಯಕ್ಕೆ ಬೇಟಿ ನೀಡಿ ವರದಿಗೆ ಮುಂದಾಗಿದ್ದರಿಂದ, ವಾರ್ಡನ್ ಮೇಡಂ ಅವರು ಮಾಹಿತಿ ನೀಡಿದ ಕೆಲ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಅವರಿಗೆ ರಾತ್ರಿ ಊಟ, ಬೆಳಗಿನ ಉಪಹಾರ ಮತ್ತು ಊಟವನ್ನು ನೀಡದೇ ತೊಂದರೆ ನೀಡಿದ್ದಾರೆ. ಓರ್ವ ವಿದ್ಯಾರ್ಥಿನಿ ಮೂರ್ಚೆ ಬಂದು ಬಿದ್ದಿರುವುದನ್ನು ಗಮನಿಸದೇ ಅದೊಂದು ನಾಟಕ ಎಂದು ದರ್ಪ ತೋರಿದ್ದಾರೆ ಎಂದು ವಿದ್ಯಾರ್ಥಿನಿಯರು ಈ ಸಂದರ್ಭದಲ್ಲಿ ತಿಳಿಸಿದರು.

150ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇರುವ ಈ ಒಂದು ವಸತಿ ನಿಲಯಕ್ಕೆ ವಾರ್ಡನ್ ಅವರು ಕೇವಲ ಒಂದು ಟ್ಯಾಂಕರ್ ನೀರು ಪೂರೈಸುತ್ತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿನಿಯರಿಗೆ ವೈಯಕ್ತಿಕವಾಗಿ ತೊಂದರೆ ಕೊಡಲಾಗುತ್ತಿದೆ. ಈ ಬಗ್ಗೆ ವಾರ್ಡನ್ ಮೇಡಂ ಅವರಿಗೆ ಕೇಳಿದರೆ ಅವರು ವಿದ್ಯಾರ್ಥಿನಿಯರೇ ಸರಿಯಿಲ್ಲ, ಅವರ ಬಾಯ್ ಫ್ರೆಂಡ್ ಗಳನ್ನು ಕರೆಸಿ ನನಗೆ ಧಮ್ಕಿ ಹಾಕುತ್ತಾರೆ, ವಿದ್ಯಾರ್ಥಿನಿಯರು ಓದೋದಕ್ಕೆ ಅಂತ ಬಂದಿದ್ರೆ ಏನೇ ಸಮಸ್ಯೆ ಇದ್ದರೂ ಅಡ್ಜಸ್ಟ್ ಮಾಡ್ಕೋತಾರೆ ಆದರೆ ಇವರು ಅದಕ್ಕೆ ಬಂದಿಲ್ಲ. ಅಂತ ವಿದ್ಯಾರ್ಥಿಗಳ ಮೇಲೆಯೇ ದರ್ಪ ತೋರುತ್ತಿದ್ದಾರೆ.

 

ಇನ್ನು ವಿದ್ಯಾರ್ಥಿನಿಯರ ಪ್ರತಿಭಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಡಿ.ದೇವರಾಜ ಅರಸು ವಸತಿ ನಿಲಯಗಳ ಅಧಿಕಾರಿ ವಾಲ್ಮೀಕ.ಬಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಈ ವೆಳೆ ವಿದ್ಯಾರ್ಥಿಗಳು ಸಮಸ್ಯೆಯನ್ನು ಬಗೆಹರಿಸುವಂತೆ ವಾರ್ಡನ್ ಅವರಿಗೆ ಕೇಳಿದರೆ ವಿದ್ಯಾರ್ಥಿಗಳನ್ನು ವಯಕ್ತಿಕವಾಗಿ ತೊಂದರೆ ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದರೆ ಈ ಬಗ್ಗೆ ನನಗೆ ಮಾಹಿತಿ ಇಲ್ಲ, ಕೂಡಲೇ ಈ ಬಗ್ಗೆ ವಿಚಾರಿಸಿ ಕ್ರಮ ಕೈಗೊಳ್ಳುತ್ತೇನೆ ಅಂತಾರೆ.

ವಸತಿ ನಿಲಯಕ್ಕೆ ಬರುವ ಬಡ ವಿದ್ಯಾರ್ಥಿನಿಯರು ತಮಗೆ ಸಿಗಬೇಕಾದ ಸೌಲಭ್ಯಗಳನ್ನ ಕೇಳಿದರೆ, ಇಲ್ಲಿ ಅಧಿಕಾರಿ ವರ್ಗ ದಬ್ಬಾಳಿಕೆ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ. ಇನ್ನಾದರೂ ವಾರ್ಡನ್ ಮೇಡಂ ಅವರಿಗೆ ಬುದ್ಧಿ ಹೇಳಿ, ನೀರಿನ ಸಮಸ್ಯೆ ಬಗೆಹರಿಸುತ್ತಾ ಇಲಾಖೆ ಅಂತ ಕಾದು ನೋಡಬೇಕಿದೆ.


[ays_poll id=3]