This is the title of the web page
This is the title of the web page
Local NewsVideo News

ಸಿಂಧನೂರು: ಎಕ್ಸ್ಪರಿ ಡೇಟ್ ಔಷಧಿ ಕೊಟ್ಟು ಪಶು ವೈದ್ಯ : 5ಕುರಿ ಸಾವು, 100ಕುರಿ ಅಸ್ವಸ್ಥ


K2kannadanews.in

expired medicine ಸಿಂಧನೂರು : ಎಕ್ಸ್ಪರಿ ಡೇಟ್ ಔಷಧಿ (expired medicine) ಕೊಟ್ಟು ಪಶು ವೈದ್ಯ (Veterinari doctor) ಎಡವಟ್ಟು ಮಾಡಿಕೊಂಡಿದ್ದು, ಔಷದಿ ಕೊಟ್ಟು ಸತ್ತ ಕುರಿಗಳನ್ನು (Five sheep died) ಪಶು ಆಸ್ಪತ್ರೆ ಮುಂದಿಟ್ಟು ವೈದ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಸಿಂಧನೂರಿನಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ತಾಲೂಕಿನ ಕೊಪ್ಪಳ ಕ್ಯಾಂಪ ಬಳಿ ಘಟನೆ ನಡೆದಿದೆ. ಮಸ್ಕಿ (Maski) ತಾಲೂಕಿನ ರತ್ನಾಪುರಹಟ್ಟಿ ಗ್ರಾಮದ ಹನುಮಂತ ಎಂಬವರ ಕುರಿಗಳು. ಕುರಿಗಳಿಗೆ ಚಿಕಿತ್ಸೆ (Treatment) ಕೊಡಿಸುವ ನಿಟ್ಟಿನಲ್ಲಿ ಪಶು ಆಸ್ಪತ್ರೆಗೆ (Veterinari hospital) ಔಷಧಿ ಪಡೆಯಲು ಬಂದ ಕುರಿಗಾಯಿಗಳಿಗೆ ಅವಧಿ ಮುಗಿದ ಔಷಧಿಗಳನ್ನ ಕೊಟ್ಟಿದ್ದಾರೆ. ಅಲ್ಲದೆ ಪಶು ತಾಲೂಕು ವೈದ್ಯಾಧಿಕಾರಿ ಡಾ. ಶರಣೇಗೌಡ ಅವರು 600 ಕುರಿಗಳಿಗೆ ಔಷದಿ ನೀಡಲು 21,000 ಲಂಚ ಪಡೆದಿದ್ದಾರೆ (Alleged bribery) ಎಂಬ ಆರೋಪ ಮಾಡುತ್ತಿದ್ದಾರೆ.

ಎಕ್ಸ್ಪರಿ ಆಗಿರುವ ಔಷಧಿಗಳನ್ನು ಕೊಟ್ಟ ನಂತರ ಐದು ಕುರಿಗಳು ಮೃತಪಟ್ಟು 100ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ (100 sheep sick). ಈ ಬಗ್ಗೆ ಸ್ಥಳಕ್ಕೆ ಪಶು ವೈದ್ಯಾಧಿಕಾರಿಯನ್ನ ಕರೆಸಿ ತೋರಿಸಿದರೆ, ನಿರ್ಲಕ್ಷದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಕುರಿ ಕಾಯಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ (Government) ಉಚಿತವಾಗಿ ಕೊಡುವ ಔಷಧಿಯನ್ನು ಮಾರಾಟ ಮಾಡಿಕೊಳ್ಳುತ್ತಿರುವ ತಾಲೂಕು ಪಶು ವೈದ್ಯಾಧಿಕಾರಿಯನ್ನು ಕೂಡಲೇ ಅಮಾನತ್ತು (suspend medical officer) ಮಾಡಬೇಕು ಮತ್ತು ಕುರಿಗಳಿಗೆ ಸೂಕ್ತ ಪರಿಹಾರ ನೀಡಿ, ಕುರಿಗಾಗಿ ಭದ್ರತೆ ಒದಗಿಸಬೇಕು ಎಂದು ರೈತ ಮುಖಂಡ ಶರಣಪ್ಪ ಮರಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 


[ays_poll id=3]