This is the title of the web page
This is the title of the web page
Local NewsVideo News

ರೈತನಿಗೆ ಸಂಕಷ್ಟ ತಂದ ಅಕಾಲಿಕ ಮಳೆ : ಕಡಲೆ ಬೆಳೆ ನಾಶ..


ಲಿಂಗಸುಗೂರು : ಜಿಲ್ಲೆಯಲ್ಲಿ ಸುರಿದ ಅಕಾಲಿಕವಾಗಿ ಸುರಿದ ಮಳೆಗೆ ಕೈಗೆ ಬಂದ ಕಡಲೆ ಬೆಳೆ ಕೊಚ್ಚಿ ಹೋಗಿ ರೈತರು ಸಂಕಷ್ಟಕ್ಕೆ ಸಿಲುಕಿದ ಘಟನೆ ಲಿಂಗಸುಗೂರು ತಾಲ್ಲೂಕಿನಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದ್ಗಲ್, ಮಾಕಾಪೂರು, ನಾಗಲಾಪುರ ಗ್ರಾಮಗಳಲ್ಲಿ ಬೆಳೆ ಹಾನಿಯಾಗಿದೆ. ದಿಢೀರನೆ ಸುರಿದ ಮಳೆಯಿಂದಾಗಿ ಜಮೀನುಗಳಲ್ಲಿ 2-3 ಅಡಿಯಷ್ಟು ನೀರು ನಿಂತಿವೆ. ಅಲ್ಪ ಸ್ವಲ್ಪ ಸುರಿದ ಮುಂಗಾರು ಮಳೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೈತರು ಕಡಲೆ ಬಿತ್ತನೆ ‌ಮಾಡಿದ್ದರು. ಇನ್ನೇನು ಎರಡೂ -ಮೂರು ತಿಂಗಳಲ್ಲಿ ಬೆಳೆ ಫಸಲಿಗೆ ಬರುವ ಸಾಧ್ಯತೆಯಿತ್ತು. ಆದ್ರೆ ಅಕಾಲಿಕ ಮಳೆಯಿಂದ ಬೆಳೆ ಕೊಚ್ಚಿ ಹೋಗಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಮುಂಗಾರು ಮಳೆ ಕೊರತೆಯಿಂದ ಸಾಕಷ್ಟು ಜನ ರೈತರು ಬೆಳೆ ಕಳೆದುಕೊಂಡಿದ್ದರು, ಇನ್ನೂ ಹರಸಾಹಸ ಪಟ್ಟು ಕೆಲ ರೈತರು ಕಡಲೆ ಬೆಳೆಗಳನ್ನು ಉಳಿಸಿಕೊಂಡಿದ್ದರು. ಇದೀಗ ಸುರಿದ ಅಕಾಲಿಕ ಮಳೆಯಿಂದಾಗಿ ಹೊಲಗಳಿಗೆ ನೀರು ನುಗ್ಗಿ, ಕೆಲವು ಕಡೆ ನೀರಿಗೆ ಬೆಳೆ ಕೊಚ್ಚಿ ಹೋದರೆ, ಇನ್ನೂ ಕೆಲವು ಕಡೆ ಹೊಲಗಳಲ್ಲಿ ನೀರು ನಿಂತು ಕೊಳೆಯುವ ಪರಿಸ್ಥಿತಿಗೆ ತಲುಪಿದೆ.

 


[ays_poll id=3]