This is the title of the web page
This is the title of the web page
Politics NewsState News

ಖರ್ಗೆ ವಿರುದ್ಧ ಅಯ್ಯೋಗ್ಯ ಹೇಳಿಕೆ : ಚಕ್ರವರ್ತಿ ಸೂಲಿಬೆಲೆಗೆ ಬಂಧನ ಭೀತಿ


K2kannadanews.in

Chakravarthy Sulibele ರಾಯಚೂರು : ಎಐಸಿಸಿ (AICC President) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna kharge) ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಅವಹೇಳನಕಾರಿ (Contemptuous) ಪದ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಮೇಲೆ ದೂರು (FIR Register) ದಾಖಲಾಗಿದೆ. ವಿಚಾರಣೆಗೆಂದು(Enquiry) ಸಿರವಾರ ಪೊಲೀಸರು (police) ತೆರಳಿರುವುದರಿಂದ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರಿಗೆ ಬಂಧನ ಭೀತಿ ಎದುರಾಗಿದೆ.

ಹೌದು ಇದೇ ತಿಂಗಳು 18.01.2024 ರಂದು ನಮೋ ಬ್ರಿಗೇಡ್ (Namo Briged) ಸಿರವಾರ ಕಾರ್ಯಕ್ರಮದಲ್ಲಿ ಖರ್ಗೆ ವಿರುದ್ಧ ಅವಹೇಳನಕಾರಿ ಹೆಳಿಕೆ ಪದವೊಂದನ್ನು ಸೂಲಿಬೇಲೆ ನೀಡಿದ್ದರು. ಖರ್ಗೆ ಅವರನ್ನು ಅಯ್ಯೋಗ್ಯ ಎಂದು ಭಾಷಣದಲ್ಲಿ (Speech) ನಿಂದಿಸಿದ್ದು, ಸುಳ್ಳುಗಳನ್ನು (Lies are the truth) ಸತ್ಯದ ರೀತಿಯಲ್ಲಿ ಜನರಿಗೆ (People) ಮೋಸ ಮಾಡುವಂತೆ, ದ್ವೇಶ ಸೃಷ್ಟಿಸುವಂತೆ ಜಾತೀಯ ಕಾರಣದಿಂದ ಅವಹೇಳನ ಹೇಳಿಕೆ ಆರೋಪ ಮಾಡಿ. ಚಕ್ರವರ್ತಿ ಸೂಲಿಬೇಲೆ ಮೇಲೆ 20.01.2024 ರಂದು ಜಗದೇವ್ ಗುತ್ತೇದಾರ್ (Jagdev guthedar) ಕಾಳಗಿ ಅವರು ಕಲಬುರ್ಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಆ ಒಂದು ಪ್ರಕರಣ ಕಲಬುರಗಿಯಿಂದ ಸಿರವಾರ ಪೋಲೀಸ್ ಠಾಣೆಗೆ ಪ್ರಕರಣ ವರ್ಗಾವಣೆಯಾಗಿದೆ.

ರಾಯಚೂರು ಜಿಲ್ಲೆಯ ಸಿರವಾರ ಪೋಲೀಸ್ ಠಾಣೆಗೆ ಪ್ರಕರಣ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು ಸೂಲಿಬೇಲೆಯನ್ನು ವಶಕ್ಕೆ ಪಡೆಯಲು ಬೆಂಗಳೂರಿಗೆ ತೆರಳಿದ್ದಾರೆ ಸಿರವಾರ ಪೊಲೀಸರು. ದೂರಿನ ಅನ್ವಯ ಕಲಂ 353, 338, 352, 342,153A, 153B, 295A, 505 ಹಾಗೂ ಇತರೆ ಕಾಲಂ ಅನ್ವಯ ಮತ್ತು ಅಲ್ಲದೇ ಎಸ್ಸಿ-ಎಸ್ಟಿ, ಪಿಎ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


[ays_poll id=3]