
K2 ನ್ಯೂಸ್ ಡೆಸ್ಕ್: ಈ ವರ್ಷ ಕಲ್ಯಾಣ ಕರ್ನಾಟಕ ಹಾಗೂ ಮದ್ಯ ಕರ್ನಾಟಕ ಭಾಗದಲ್ಲಿ ಎರಡು ಎನ್.ಸಿ.ಸಿ ಶಿಬಿರ ಗಳನ್ನು ಏರ್ಪಡಿಸಲಾಗುವುದು ಹಾಗೂ ಅದಕ್ಕೆ ಅಗತ್ಯವಿರುವ ಎಲ್ಲ ಸವಲತ್ತುಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಎನ್ ಸಿಸಿ ಕೆಡೆಟ್ ಗಳು ಗಣ ರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಂಡು ಕರ್ನಾಟಕ ಹಾಗೂ ಗೋವಾ ರಾಜ್ಯ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಹಾಗೂ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಳ್ಳುವುದು ಸುಲಭವಲ್ಲ. 95 ಸಾವಿರ ಕೆಡೆಟ್ ಗಳ ಪೈಕಿ 111 ಮಾತ್ರ ಆಯ್ಕೆಯಾಗಿದ್ದು, ಇದು ನಿಮ್ಮ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದರು.
ಶಿಸ್ತು ಮುಖ್ಯ : ಅತ್ಯಂತ ಬಲಿಷ್ಠ, ಯುವ ಪರೇಡ್ ನ್ನು ಕಟ್ಟುವ ಉದ್ದೇಶದಿಂದ ಎನ್.ಸಿ.ಸಿ 1947 ರಿಂದಲೂ ಅಸ್ತಿತ್ವಕ್ಕೆ ಬಂದಿತು. ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಶಿಸ್ತು ಇದ್ದರೆ ವ್ಯಕ್ತಿತ್ವ ಬೆಳೆಯುತ್ತದೆ. ದೇಶಕ್ಕೆ ಚಾರಿತ್ರ್ಯ ಅಗತ್ಯ. ದೇಶಕ್ಕೆ ಚರಿತ್ರೆ ಇದೆ, ಆದರೆ ಚಾರಿತ್ರ್ಯ ಬೇಕಿದೆ. ಆಚಾರ್ಯರನ್ನು ಹೊಂದಿದ್ದೇವೆ. ಆಚರಣೆ ಬೇಕಿದೆ. ಆಚರಣೆ ಎನ್ ಸಿ ಸಿಯಲ್ಲಿದೆ ಎಂದು ಅಭಿಪ್ರಾಯ ಪಟ್ಟರಲ್ಲದೇ ಆಧುನಿಕ ಜಗತ್ತಿನಲ್ಲಿ ಎನ್ ಸಿಸಿಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಅಧಿಕಾರಿಗಳು ಎನ್ ಸಿ ಸಿ ಸೇರುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕು ಎಂದರು.
ರೆಜಿಮೆಂಟ್ ಮಾದರಿಯಲ್ಲಿ ಎನ್.ಸಿ.ಸಿ ಬೆಳೆಯಬೇಕು : ಎನ್ ಸಿ ಸಿ ರೆಜಿಮೆಂಟ್ ಮಾದರಿಯಲ್ಲಿ ಬೆಳೆಯಬೇಕು. ಬೆಟಾಲಿಯನ್ ಗಳನ್ನು ರೇಜಿಮೆಂಟ್ ಗಳಾಗಿ ಕಟ್ಟಿದಂತೆಯೇ ಎನ್.ಸಿ.ಸಿ ಯನ್ನೂ ರೆಜಿಮೆಂಟ್ ಗಳಾಗಿ ಬೆಳೆಸಬೇಕು. ಆಗ ಮಾತ್ರ ಎನ್.ಸಿ.ಸಿ ಗೆ ಪ್ರಾಮುಖ್ಯತೆ ದೊರೆಯುತ್ತದೆ ಹಾಗೂ ಯುವಕರೂ ಸೇರ್ಪಡೆ ಯಾಗಲು ಉತ್ತೇಜನ ದೊರೆಯುತ್ತದೆ ಎಂದರು.
ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ : ಎನ್.ಸಿ.ಸಿ ವ್ಯಕ್ತಿತ್ವ ವಿಕಸನಕ್ಕೆ ಕೂಡ ಸಹಕಾರಿಯಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ, ಗ್ರಾಮೀಣ ಪ್ರದೇಶಗಳಿಂದ ಸೇರ್ಪಡೆ ಯಾಗಿದ್ದಾರೆ. ಈ ಎಲ್ಲಾ ಮಕ್ಕಳೂ ಪ್ರತಿಭಾವಂತರು ಹಾಗೂ ಬುದ್ಧಿವಂತರಿದ್ದಾರೆ. ಅವರಲ್ಲಿ ಆತ್ಮವಿಶ್ವಾಸದ ಅಗತ್ಯವಿದೆ. ಇದು ಎನ್.ಸಿ.ಸಿ ಯಿಂದ ಅವರಿಗೆ ದೊರೆಯುತ್ತದೆ. ಜೀವನದ ಸವಾಲುಗಳನ್ನು ಎದುರಿಸಬೇಕು. ಜೀವನವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬೇಕು.
ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಎನ್ ಸಿಸಿ ಸೇರುವ ಮೊದಲು ಇರುವ ಅಭಿಪ್ರಾಯಕ್ಕೂ ನಂತರದ ಅಭಿಪ್ರಾಯಕ್ಕೂ ಬದಲಾವಣೆಯಾಗಿರುತ್ತದೆ. ಇಲ್ಲಿ ಕಲಿತ ಶಿಸ್ತನ್ನು ಜೀವನದುದ್ದಕ್ಕೂ ಪಾಲಿಸಬೇಕು ಎಂದರು.
ಈ ವರ್ಷ ಹೊಸ 75 ಯುನಿಟ್ ಗಳ ಪ್ರಾರಂಭ ; ಎನ್ ಸಿಸಿಯಲ್ಲಿ ಕಲಿತ ಧೈರ್ಯ, ಆತ್ಮವಿಶ್ವಾಸ ಜೀವನದಲ್ಲಿ ನಿಮ್ಮನ್ನು ಯಶಸ್ವಿಗೊಳಿಸುತ್ತದೆ. ರಾಜ್ಯ ಸರ್ಕಾರ ಎನ್.ಸಿ.ಸಿ ಗೆ ಅಗತ್ಯವಿರುವ ನೆರವು ನೀಡುತ್ತದೆ. ಕಳೆದ ವರ್ಷ ಸುಭಾಸಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಅಂಗವಾಗಿ 75 ಹೊಸ ಯುನಿಟ್ ಆರಂಭಿಸುವುದಾಗಿ ಹೇಳಿದ್ದೆವು. ಈ ವರ್ಷ ಹೊಸದಾಗಿ 75 ಯುನಿಟ್ ಗಳನ್ನು ಆರಂಭವಾಗಲಿವೆ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ 75 ಯೂನಿಟ್ ಗಳನ್ನು ಸೇರಿಸಲಾಗಿದೆ. ಎನ್ ಸಿಸಿಯನ್ನು ಪ್ರೌಢ ಶಾಲಾ ಮಟ್ಟಕ್ಕೆ ವಿಸ್ತರಿಸಬೇಕು. ಕರಾವಳಿಯಲ್ಲಿ ಈ ವರ್ಷ 2800 ಕ್ಕೂ ಹೆಚ್ಚು ಹೊಸ ಎನ್ ಸಿಸಿ ಕೆಡೆಟ್ ಗಳು ಸೇರ್ಪಡೆಯಾಗಿದ್ದಾರೆ ಎಂದರು.
![]() |
![]() |
![]() |
![]() |
![]() |
[ays_poll id=3]