
K2 ನ್ಯೂಸ್ ಡೆಸ್ಕ್ : ಗ್ಯಾರೆಂಟಿ ಯೋಜನೆಯಿಂದ ಸರ್ಕಾರದ ಬೊಕ್ಕಸ ಖಾಲಿಯಾಗುತ್ತಿದ್ದು, ಇದೀಗ ನಿಧಾನವಾಗಿ ದರ ಏರಿಕೆ ಸೂತ್ರ ಪಾಲಿಸುತ್ತಿದೆ. ವಿದ್ಯುತ್ ದರ ಏರಿಕೆ ಆಯಿತು, ಹಾಲಿನ ದರ ಏರಿಕೆ ಆಯಿತು, ಇದೀಗ ಸರ್ಕಾರ ಮತ್ತೊಂದು ದರ ಏರಿಕೆಗೆ ಮುಂದಾಗಿದೆ ಸರ್ಕಾರ.
ಇದೀಗ ರಾಜ್ಯ ಸರ್ಕಾರದಿಂದ ಮತ್ತೊಂದು ಹೊಸ ಮಾಹಿತಿಯೊಂದು ಲಭ್ಯವಾಗಿದೆ. ಶಕ್ತಿ ಯೋಜನೆಯ ಎಫೆಕ್ಟ್ ಇದಾಗಿದ್ದು, ಇದೀಗ ಆದಾಯದ ಮೂಲ ಹೆಚ್ಚಿಸುವ ಸಲುವಾಗಿ ಹೊಸ ಮಾಸ್ಟರ್ ಪ್ಲಾನ್ ಸಿದ್ದಗೊಳಿಸಿದೆ ಎಂದು ತಿಳಿದು ಬಂದಿದೆ. ದಾಖಲೆಗಳ ಪ್ರಕಾರ ಕೆಎಸ್‌ಆರ್‌ಟಿಸಿ ಬಸ್‌ಗಳ ದರವನ್ನು ಹೆಚ್ಚಿಸುವ ಯೋಜನೆಯಲ್ಲಿದೆ ಎಂದು ತಿಳಿದು ಬಂದಿದೆ. ಈಗಿರುವ ಬಸ್‌ಗಳ ದರವನ್ನು ಕೆಎಸ್‌ಆರ್‌ಟಿಸಿ ನಿಗಮ ಆದೇಶ ಹೊರಡಿಸಿದೆ. ಇನ್ನು ಇದರಲ್ಲು ಒಂದು ಟ್ವಿಸ್ಟ್ ಇದ್ದು, ಒಪ್ಪಂದದ ಮೇರೆಗೆ ಪ್ರಯಾಣ ಮಾಡುವ ಬಸ್‌ಗಳ ದರವನ್ನು ಏರಿಸಲು ಆದೇಶ ಹೊರಡಿಸಿದ್ದು ಆದಷ್ಟು ಬೇಗ ಇದು ಕಾರ್ಯ ರೂಪಕ್ಕೆ ತರಲಿದೆ ಎಂದು ಮಾಹಿತಿಗಳು ತಿಳಿಸಿದ್ದು, ಕರ್ನಾಟಕ ಸಾರಿಗೆ, ರಾಜಹಂಸ, ಎಕ್ಸಿಕ್ಯೂಟಿವ್, ರಾಜಹಂಸ ಬಸ್‌ಗಳಿಗೆ ದರ ಏರಿಕೆ ಮಾಡಲಿದ್ದಾರೆ.
ರಾಜಹಂಸ ಸೇರಿದಂತೆ ಏಳು ವಿವಿಧ ರೀತಿಯ ಒಪ್ಪಂದದ ಮೇರೆಗೆ ಕಾರ್ಯ ನಿರ್ವಹಿಸುವ ಬಸ್‌ಗಳ ದರವನ್ನು ಏರಿಸಲಾಗುತ್ತಿದ್ದು, ಇದರ ಬಗ್ಗೆ ಜನ ಯಾವ ರೀತಿಯಾಗಿ ಸ್ಪಂದಿಸಲಿದ್ದಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ದೊರಕಿರುವ ಮಾಹಿತಿಗಳ ಪ್ರಕಾರ ಹೊಸ ಪರಿಷ್ಕ್ರತ ದರಗಳು ಮುಂದಿನ ತಿಂಗಳು ಅಂದರೆ ಆಗಸ್ಟ್ ಒಂದನೇ ತಾರೀಖಿನಿಂದ ಜಾರಿಗೆ ಬರಲಿದೆ.
![]() |
![]() |
![]() |
![]() |
![]() |
[ays_poll id=3]