
ರಾಯಚೂರು : ರಾಯಚೂರು ಜಿಲ್ಲಾಡಳಿತ ಮತ್ತು ಬಿಡದಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನಡುವೆ ಸಾಮಾಜಿಕ ಹೊಣೆಗಾರಿಕಾ ಕಾರ್ಯಕ್ರಮದಡಿಯಲ್ಲಿ ಟಿಎಂಕೆ ಎಬಿಸಿಡಿ ಒಡಂಬಡಿಕೆ ವಿನಿಮಯ ಕಾರ್ಯಕ್ರಮ ಜರುಗಿತು.
ಆ.15ರಂದು ನಗರದ ಮಹತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವತಾಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನೈರ್ಮಲ್ಯದ ವರ್ತನೆ ಬದಲಾವಣೆ(ಎಬಿಸಿಡಿ) ಕಾರ್ಯಕ್ರಮಕ್ಕೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಅವರು ಜಿಲ್ಲಾಡಳಿತದೊಂದಿಗೆ ಒಂಡಬಂಡಿಕೆ ಮಾಡಿಕೊಂಡಿತು. ಮತ್ತು ಒಡಂಬಡಿಕೆ ಪತ್ರಕ್ಕೆ ಜಿಲ್ಲಾಡಳಿತ ಮತ್ತು ಟೊಯೋಟಾ ಕಿರ್ಲೋಸ್ಕರ್ ಮೊಟಾರ್ ಸಹಿ ಹಾಕಿವೆ.
ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ 2015ರಲ್ಲಿ ಎಬಿಸಿಡಿ ಕಾರ್ಯಕ್ರಮವು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಆರಂಭಿಸಿತ್ತು.
ವಿದ್ಯಾರ್ಥಿಗಳನ್ನು ಉದ್ದೇಶಿಸಲಾದ ಈ ಕಾರ್ಯಕ್ರಮ ನೈರ್ಮಲ್ಯ ಮತ್ತು ಆರೋಗ್ಯ ಜಾಗೃತಿ ಕಡೆಗೆ ಮಕ್ಕಳ ನಡವಳಿಕೆಗಳಲ್ಲಿ ಬದಲಾವಣೆಗಳನ್ನು ತರಲು ಯಶಸ್ವಿಯಾಗಿದೆ. ಮಕ್ಕಳ ಮೂಲಕವೇ ಅವರ ಕುಟುಂಬಗಳು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸುವತ್ತ ಗಮನ ಹರಿಸುವುದು ಇದರ ಉದ್ದೇಶವಾಗಿದೆ.
![]() |
![]() |
![]() |
![]() |
![]() |
[ays_poll id=3]